ADVERTISEMENT

ಕುಮಟಾ: ತಾಳಮದ್ದಳೆ ಸಪ್ತಾಹ ಅ.6ರಿಂದ

ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:35 IST
Last Updated 26 ಸೆಪ್ಟೆಂಬರ್ 2022, 15:35 IST

ಕಾರವಾರ: ಕುಮಟಾದ ಶ್ರೀ ಮಹಾಸತಿ ಸಭಾಭವನದಲ್ಲಿ ಅ.6ರಿಂದ 12ರವರೆಗೆ, ಶ್ರೀರಂಗಪಟ್ಟಣದ ಯಕ್ಷ ಕೌಮುದಿ ಟ್ರಸ್ಟ್ ಮತ್ತು ಕುಮಟಾದಯುಗಾದಿ ಉತ್ಸವ ಸಮಿತಿ ಸಹಯೋಗದಲ್ಲಿ ತಾಳಮದ್ದಳೆ ಸಪ್ತಾಹ ಆಯೋಜನೆಯಾಗಿದೆ.

ಪ್ರತಿದಿನ ಸಂಜೆ 4.30ಕ್ಕೆ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಸರ್ವೇಶ್ವರ ಹೆಗಡೆ ಮೂರೂರು, ಅನಂತ ಹೆಗಡೆ ದಂತಳಿಗೆ, ಗೋಪಾಲಕೃಷ್ಣ ಹೆಗಡೆ ಜೋಗಿಮನೆ, ಪರಮೇಶ್ವರ ಭಂಡಾರಿ ಕರ್ಕಿ, ಪಿ.ಕೆ.ಹೆಗಡೆ ಹರಿಕೇರಿ, ವಿದ್ವಾನ್ ಉಮಾಕಾಂತ ಭಟ್ಟ, ಡಾ.ಜಿ.ಎಲ್.ಹೆಗಡೆ, ವಾಸುದೇವರಂಗ ಭಟ್ಟ, ಹರೀಶ್ ಬಳಂತಿಮೊಗರು, ಗಣಪತಿ ಭಟ್ಟ, ಸಂಕದಗುಂಡಿ, ಗಣರಾಜ ಕುಂಬ್ಳೆ, ನಾರಾಯಣ ಯಾಜಿ, ಗ.ನಾ.ಭಟ್ಟ, ಮೈಸೂರು, ಜಿ.ವಿ.ಹೆಗಡೆ ಮೂರೂರು, ಮಹೇಶ ಭಟ್ಟ, ಉಮಚಗಿ ಮೊದಲಾದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

‘ಕರ್ಣಪರ್ವ’, ‘ಭಕ್ತ ಮಯೂರಧ್ವಜ‌’, ‘ಗುರು ದಕ್ಷಿಣೆ’, ‘ವಾಮನ ಚರಿತ್ರೆ’, ‘ತ್ರಿಶಂಕು ಚರಿತ್ರೆ’, ‘ಕರ್ಣಭೇದನ’ ಮತ್ತು ‘ಭೀಷ್ಮಾರ್ಜುನ’ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

ADVERTISEMENT

ಅ.6ರಂದು ಸಂಜೆ 4ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವೇದಮೂರ್ತಿ ನೀಲ್ಕೋಡು ಸುಬ್ರಹ್ಮಣ್ಯ ಭಟ್ಟ, ಕುಮಟಾದ ಡಾ.ಸುರೇಶ ಹೆಗಡೆ, ಸಾಗರದ ಡಾ. ಎಚ್.ಎಸ್.ಮೋಹನ್, ಕುಮಟಾದ ಉದ್ಯಮಿ ಮುರಳೀಧರ ಪ್ರಭು, ‘ಯಕ್ಷರಂಗ‌’ ಮಾಸಿಕ ಪತ್ರಿಕೆಯ ಸಂಪಾದಕ ಕಡತೋಕಾ ಗೋಪಾಲಕೃಷ್ಣ ಭಾಗವತ ಪಾಲ್ಗೊಳ್ಳುತ್ತಿದ್ದಾರೆ.

ಅ.12ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭದಲ್ಲಿ ನಡೆಯಲಿದ್ದು, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ, ಉದ್ಯಮಿ ಪೋಳ್ಯ ಉಮೇಶ್ ಶೆಟ್ಟಿ ಮುಂಬೈ, ನಿವೃತ್ತ ಎಂಜಿನಿಯರ್ ಆರ್.ಜಿ. ಭಟ್ಟ ಕುಮಟಾ ಭಾಗವಹಿಸುತ್ತಾರೆ.

ಈ ತಾಳಮದ್ದಳೆ ಸಪ್ತಾಹಕ್ಕೆ ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯಕ್ಷ ಕೌಮುದಿ ಟ್ರಸ್ಟ್‌ನ ಅಧ್ಯಕ್ಷ ಗ.ನಾ.ಭಟ್ಟ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.