ADVERTISEMENT

ಯಲ್ಲಾಪುರ: ಮನೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 12:53 IST
Last Updated 17 ಜುಲೈ 2024, 12:53 IST
ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿ ಹಳೆಮನೆ ಗೋಡೆ ಬಿದ್ದು ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದಿರುವುದು
ಯಲ್ಲಾಪುರ ಪಟ್ಟಣದ ಮಂಜುನಾಥ ನಗರದಲ್ಲಿ ಹಳೆಮನೆ ಗೋಡೆ ಬಿದ್ದು ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದಿರುವುದು   

ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಬುಧವಾರ ಬೆಳಿಗ್ಗೆ ಹಳೆ ಮನೆಯೊಂದರ ಗೋಡೆ ಕುಸಿದು ಪಕ್ಕದಲ್ಲಿಯೇ ನೂತನವಾಗಿ ನಿರ್ಮಾಣ ಹಂತದಲ್ಲಿದ್ದ ಮನೆಯ ಗೋಡೆಮೇಲೆ ಬಿದ್ದಿದೆ.

ಭೀಮವ್ವ ಬೋವಿ ವಡ್ಡರ್ ಎಂಬುವವರ ಹಳೆಯ ಮನೆಯ ಗೋಡೆ ಕುಸಿದು ಪಕ್ಕದಲ್ಲಿ ನಿರ್ಮಿಸುತ್ತಿರುವ ಮಣಿಕಂಠ ಉಣಕಲ್ ಎಂಬುವರ ಮನೆ ಗೋಡೆಯ ಮೇಲೆ ಬಿತ್ತು. ಪರಿಣಾಮ ಆ ಗೋಡೆಯು ಕುಸಿದಿದೆ. ಯಾವುದೇ ಅವಘಡ ಸಂಭವಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT