ADVERTISEMENT

ಯಲ್ಲಾಪುರ | ಬಸ್‌, ಲಾರಿ ಡಿಕ್ಕಿ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:11 IST
Last Updated 17 ಆಗಸ್ಟ್ 2025, 5:11 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಯಲ್ಲಾಪುರ: ತಾಲ್ಲೂಕಿನ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಹಿಟ್ಟಿನಬೈಲ್‌ ಸಮೀಪ ಶುಕ್ರವಾರ ರಾತ್ರಿ ಬಸ್‌ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. 7 ಜನರಿಗೆ ಗಾಯವಾಗಿದೆ.

ADVERTISEMENT

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ (40), ಜಾಲಿಹಾಳದ ಗಿರಿಜವ್ವ ಅಯ್ಯಪ್ಪ ಬೂದನ್ನವರ (30) ಮೃತರು. ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅಮೀನಗಡದ ಚಿದಾನಂದ ಕಿತ್ತಳಿ, ಮಲ್ಲಪ್ಪ ಯಮನಪ್ಪ ಕತ್ತಿ, ಮಂಜುಳಾ ಗಾಳೆಪ್ಪ ಹಳಬರ್‌, ಮಲ್ಲಿಕಾಜು೯ನ ಪಕೀರಪ್ಪ ಅಂದಲಿ, ದೇವಕಿ ಹನುಮಂತ ಬೆಳ್ಳಿ, ಬಾದಾಮಿಯ ಸಮೀರಾ ಬೇಗಂ, ಹುನಗುಂದದ ಷರೀಪಾ ಬೇಗಂ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.