ADVERTISEMENT

ಯೋಗ ದಿನ ಜಾಗೃತಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 11:18 IST
Last Updated 20 ಜೂನ್ 2019, 11:18 IST
ಶಿರಸಿಯಲ್ಲಿ ನಡೆದ ಯೋಗ ದಿನ ಜಾಗೃತಿ ಜಾಥಾಕ್ಕೆ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಚಾಲನೆ ನೀಡಿದರು
ಶಿರಸಿಯಲ್ಲಿ ನಡೆದ ಯೋಗ ದಿನ ಜಾಗೃತಿ ಜಾಥಾಕ್ಕೆ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಚಾಲನೆ ನೀಡಿದರು   

ಶಿರಸಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ (ಜೂ.21) ನಡೆಯಲಿರುವ ಸಾಮೂಹಿಕ ಯೋಗಾಭ್ಯಾಸ ಹಾಗೂ ಯೋಗ ಪ್ರದರ್ಶನ, ಯೋಗದ ಪ್ರಯೋಜನದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗುರುವಾರ ನಗರದಲ್ಲಿ ಯೋಗ ಜಾಥಾ ನಡೆಯಿತು.

ಮಾರಿಕಾಂಬಾ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಜಾಥಾಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ, ಮಾರಿಕಾಂಬಾ ಕಾಲೇಜು, ಪ್ರೌಢಶಾಲೆ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಐದು ಕಿ.ಮೀ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಪ್ರಮುಖರಾದ ದಿನೇಶ ಹೆಗಡೆ, ಅನಿಲ ಕರಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ ಭಂಡಾರಿ, ಐಡಿಎ ಘಟಕದ ಅಧ್ಯಕ್ಷೆ ಡಾ. ಅರ್ಪಣಾ ಹೆಗಡೆ, ಐಎಂಎ ಘಟಕದ ಕಾರ್ಯದರ್ಶಿ ಡಾ. ತನುಶ್ರೀ ಹೆಗಡೆ, ಡಾ. ಮಂಜುನಾಥ, ಶ್ರೀಕಾಂತ ಹೆಗಡೆ, ಪ್ರಕಾಶ ನೇತ್ರಾವಳಿ, ಜಿ.ವಿ.ಭಟ್ಟ, ಜನಾರ್ದನಾಚಾರ್ಯ ಶರ್ಮ, ಮಂಗಳಗೌರಿ ಭಟ್, ರವಿ ಹೆಗಡೆ ಗಡಿಹಳ್ಳಿ, ಗಣೇಶ ಶೇಟ್, ಅನಿತಾ ಪರ್ವತೀಕರ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.