
ಪ್ರಜಾವಾಣಿ ವಾರ್ತೆ
ಪೊಲೀಸ್
ಸಾಂದರ್ಭಿಕ ಚಿತ್ರ
ಕಾರವಾರ: ‘ಮನೆಯಲ್ಲೇ ಕುಳಿತು ಹಣ ಸಂಪಾದಿಸಿ’ ಎಂಬ ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹಿರಾತು ನಂಬಿ ಯಲ್ಲಾಪುರ ಪಟ್ಟಣದ ಕೆ.ಆರ್.ಸುಹಾಸ್ ಎಂಬ ಯುವಕ ₹29.13 ಲಕ್ಷ ಕಳೆದುಕೊಂಡಿದ್ದಾರೆ.
‘ವರ್ಷದ ಹಿಂದೆ ಸುಹಾಸ್ ಸಾಮಾಜಿಕ ಜಾಲತಾಣವೊಂದರಲ್ಲಿ ಮನೆಯಿಂದಲೇ ಹಣ ಸಂಪಾದಿಸುವ ಉದ್ಯೋಗವಿದೆ ಎಂಬುದನ್ನು ನಂಬಿ ಕೆಲಸ ಆರಂಭಿಸಿದ್ದರು. ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರಿವ್ಯೂ ನೀಡುವ ಕೆಲಸ ಮಾಡಿ ಅದಕ್ಕೆ ಪ್ರತಿಯಾಗಿ ಅಲ್ಪ ಮೊತ್ತದ ಹಣವನ್ನು ವಂಚಕರು ಪಾವತಿಸಿದ್ದರು. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸುವ ಆಮಿಷ ಒಡ್ಡಿದ್ದರು. ಇದನ್ನು ನಂಬಿ ಹಂತ ಹಂತವಾಗಿ ₹29,13,459 ಮೊತ್ತವನ್ನು ಸುಹಾಸ್ ಹೂಡಿಕೆ ಮಾಡಿದ್ದಾರೆ. ಈವರೆಗೆ ಹಣವನ್ನೂ ಮರಳಿಸದೆ ವಂಚಿಸಲಾಗಿದೆ’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.