ADVERTISEMENT

ಹೊಸಪೇಟೆ: ಉದ್ಯೋಗ ಮೇಳದಲ್ಲಿ 174 ಮಂದಿಗೆ ನೌಕರಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 14:28 IST
Last Updated 17 ಫೆಬ್ರುವರಿ 2023, 14:28 IST
ಹೊಸಪೇಟೆಯ ಥಿಯೋಸಫಿಕಲ್‌ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಸಂಸ್ಥೆಯ ಉಪಾಧ್ಯಕ್ಷ ಭೂಪಾಳ ರಾಘವೇಂದ್ರ ಶೆಟ್ಟಿ ಉದ್ಘಾಟಿಸಿದರು
ಹೊಸಪೇಟೆಯ ಥಿಯೋಸಫಿಕಲ್‌ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಸಂಸ್ಥೆಯ ಉಪಾಧ್ಯಕ್ಷ ಭೂಪಾಳ ರಾಘವೇಂದ್ರ ಶೆಟ್ಟಿ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ನಗರದ ಉಗಮದೇವಿ ಭವರಲಾಲ್ ನಾಹರ್ ಥಿಯೋಸಫಿಕಲ್ ಮಹಿಳಾ ಕಾಲೇಜು ಹಾಗೂ ಬಳ್ಳಾರಿಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 174 ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾದರು.

ಒಟ್ಟು 1453 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 174 ವಿದ್ಯಾರ್ಥಿಗಳನ್ನು ವಿವಿಧ ಕಂಪನಿಗಳು ಆಯ್ಕೆ ಮಾಡಿದ್ದು, ಇದರಲ್ಲಿ ಈಗಾಗಲೇ 64 ಮಂದಿ ಹೆಸರು ಅಂತಿಮಗೊಂಡಿದೆ. ಇದರಲ್ಲಿ 18 ಮಂದಿಗೆ ತಕ್ಷಣದಿಂದಲೇ ನೌಕರಿಗೆ ಸೇರುವಂತೆ ತಿಳಿಸಲಾಗಿದೆ. ಇನ್ನು, 26 ವಿದ್ಯಾರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದಾರೆ. ಒಟ್ಟು 18 ಕಂಪನಿಗಳವರು ಕ್ಯಾಂಪಸ್‌ ಸಂದರ್ಶನ ನಡೆಸಿದರು.

ಇದಕ್ಕೂ ಮುನ್ನ ಸಂಸ್ಥೆಯ ಉಪಾಧ್ಯಕ್ಷ ಭೂಪಾಳ ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ, ಯುವಕರು ಉದ್ಯೋಗಕ್ಕಾಗಿ ಅರಸಿಕೊಂಡು ಹೋಗಬೇಕಿಲ್ಲ. ಅವರಿಗಾಗಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅನೇಕ ಕಂಪನಿಗಳವರು ಬಂದಿದ್ದಾರೆ. ತಮ್ಮ ಸಾಮರ್ಥ್ಯ, ಪ್ರತಿಭೆ ತೋರಿಸಿ ಆಯ್ಕೆಯಾಗಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಉದ್ಯೋಗ ಅಧಿಕಾರಿ ಹಟ್ಟಪ್ಪ, ಸಂಸ್ಥೆ ಅಧ್ಯಕ್ಷ ಜಿ. ಭರಮಲಿಂಗನಗೌಡ, ಜಂಟಿ ಕಾರ್ಯದರ್ಶಿ ಕೆ.ಹನುಮಂತರಾವ್, ಕಾರ್ಯದರ್ಶಿ ಅಶೋಕ್ ಜೀರೆ, ಖಜಾಂಚಿ ಡಿ. ಪಾಂಡುರಂಗ ಶೆಟ್ಟಿ, ಸದಸ್ಯರಾದ ವಿ. ಶರಣಪ್ಪ, ಜಂಬಾನಹಳ್ಳಿ ಸತ್ಯನಾರಾಯಣ, ದೇಶಪಾಂಡೆ, ಪ್ರಹ್ಲಾದ್ ಭೂಪಾಳ್‌, ಪ್ರಾಚಾರ್ಯರಾದ ಸಂಗೀತಾ ಗಾಂವಕರ್‌, ಪಿ.ಎಂ. ಜಗದೀಶ್, ಮಂಜುನಾಥ ಇದ್ದರು. ಚೈತ್ರಾ, ಅನುಷಾ, ಅನಿತಾ ಪ್ರಾರ್ಥನಾ ಗೀತೆ ಹಾಡಿದರು. ಅನಸೂಯ ಅಂಗಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.