
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬ್ರಹಳ್ಳಿಯಲ್ಲಿರುವ ವಿದ್ಯುತ್ ಸರಬರಾಜು ಉಪ ಕೇಂದ್ರಕ್ಕೆ ಅಳವಡಿಸಲು ಗುಜರಾತ್‍ನಿಂದ ತರಿಸಲಾದ 20ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ(ಟ್ರಾನ್ಸ್‌ಫಾರ್ಮರ್)ಕ್ಕೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಈ ಭಾಗದಲ್ಲಿ ಕೃಷಿ ಆಧಾರಿತ ಕುಟುಂಬಗಳು ಹೆಚ್ಚಿದ್ದು ರೈತರ ಪಂಪ್‍ಸೆಟ್‍ಗಳು ಅಪಾರ ಸಂಖ್ಯೆಯಲ್ಲಿವೆ, ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ತುಂಬ ವ್ಯತ್ಯಯವಾಗುತ್ತಿತ್ತು, ಇದರಿಂದಾಗಿ ಬೆಳೆಗಳು ಒಣಗುತ್ತಿದ್ದವು. ರೈತರು ನಷ್ಟ ಅನುಭವಿಸುವ ಅನಿವಾರ್ಯತೆ ಇತ್ತು. ಈ ಭಾಗದ ರೈತರೊಂದಿಗೆ ನಿರಂತರ ಹೋರಾಟ ಮಾಡಿದ ಫಲವಾಗಿ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯುತ್ ಉಪಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದ್ದಾರೆ, ₹10ಕೋಟಿ ಮೊತ್ತದ ವಿದ್ಯುತ್ ಪರಿವರ್ತಕ ಒದಗಿಸಿದ್ದಾರೆ ಎಂದರು.
ಇನ್ನುಮುಂದೆ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಕೊಟ್ರೇಶ್, ಪಿಕೆಪಿಎಸ್ ಅಧ್ಯಕ್ಷ ಮಾಬುಸಾಹೇಬ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಜಿ.ಸುರೇಶ್, ಮುಖಂಡರಾದ ಮೈಲಾರದ ಶಿವಕುಮಾರ್, ಮಂಜುನಾಥ ಪಾಟೀಲ್, ಬಸವಲಿಂಗನಗೌಡ, ರಾಜಾಸಾಬ್, ಖಾಜಾ ಸಾಹೇಬ್, ಟಿ.ಫಕ್ಕೀರಪ್ಪ, ದೊಡ್ಡಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.