
ಹೊಸಪೇಟೆ (ವಿಜಯನಗರ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.
ಪಕ್ಷದ ಮಂಡಲ ಅಧ್ಯಕ್ಷ ಶಂಕರ್ ಮೇಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟಲ್ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ನಂತರ ಮಹಿಳಾ ಸಮಾಜವು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಮಕ್ಕಳ ಹೆಸರಿನಲ್ಲಿ 10 ಸಸಿಗಳನ್ನು ನೆಡಲಾಯಿತು.
ದ್ವೇಷ ಭಾಷಣಕ್ಕೆ ವಿರೋಧ: ಪಕ್ಷದ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ತೆರಳಿ ದ್ವೇಷ ಭಾಷಣ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಬಾರದು ಎಂದು ಕೋರಿ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಅಶೋಕ್ ಜೀರೆ, ಕೆ.ಎಸ್. ರಾಘವೇಂದ್ರ, ಕಾಸೆಟ್ಟಿ ಉಮಾಪತಿ. ಶಶಿಧರ್ ಸ್ವಾಮಿ. ಬಿ.ಜೀವರತ್ನಂ, ರೇವಣಸಿದ್ದಪ್ಪ ಜಿ.ಆರ್.ಮಧುಸೂದನ್. ಆರ್.ಶ್ರೀನಿವಾಸ್, ಮಧುರ ಚೆನ್ನ ಶಾಸ್ತ್ರಿ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.