
ಹೊಸಪೇಟೆಯ ಸಾಯಿಲೀಲಾ ರಂಗಮಂದಿರದಲ್ಲಿ ಭಾನುವಾರ ಭಾರತೀಯ ಆಯುಷ್ ಒಕ್ಕೂಟದ ವತಿಯಿಂದ ನಡೆದ ನೋವು ನಿವಾರಕ ವಿದ್ಧ, ಅಗ್ನಿಕರ್ಮ ಚಿಕಿತ್ಸಾ ವಿಧಾನ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ಹೊಸಪೇಟೆ: ನಗರದ ಜಂಬುನಾಥ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗಾಗಿ 25 ಹಾಸಿಗೆಗಳನ್ನು ಕಾಯ್ದಿರಿಸುವ ಚಿಂತನೆ ನಡೆದಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಅವರು ಭಾನುವಾರ ಇಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ) ಹೊಸಪೇಟೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಟ್ಟದ ಅಗ್ನಿಕರ್ಮ, ವಿದ್ಧ ಕರ್ಮ ಚಿಕಿತ್ಸೆ ಕುರಿತ ಕಾರ್ಯಾಗಾರ ‘ಬೋದ್ಧವ್ಯ–2025’ ಉದ್ಘಾಟಿಸಿ ಮಾತನಾಡಿದರು.
ಪುಣೆಯ ಡಾ.ಚಂದ್ರಕುಮಾರ್ ದೇಶಮುಖ್ ಅವರು ಅಗ್ನಿ ಕರ್ಮ ಮತ್ತು ವಿದ್ಧ ಕರ್ಮದ ಬಗ್ಗೆ ವಿಶೇಷ ಮಾಹಿತಿ ನೀಡಿದರು. 50ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸಾ ವಿಧಾನಗಳ ಮೂಲಕ ತಕ್ಷಣದ ಪರಿಹಾರ ನೀಡಿದರು.
ರಾಜೀವ್ ಗಾಂಧಿ ವೈದ್ಯವಿಜ್ಞಾನ ವಿಶ್ವವಿದ್ಯಾಲಯದ ಬಿಒಎಸ್ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್, ಸ್ವಾತಿ ಹೋಟೆಲ್ ಗುಂಪಿನ ಮಾಲೀಕ ಅಭಿಷೇಕ್ ಕೆ.ಎಸ್., ಜಿಲ್ಲಾ ಆಯುಷ್ ಅಧಿಕಾರಿ ಡಾ.ಫಣೀಂದ್ರ, ಎಎಫ್‌ಐ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಬಿ.ವಿ.ಭಟ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.