ADVERTISEMENT

ಸಿದ್ದರಾಮಯ್ಯ ಮುಖ ನೋಡಿ ಬಿಜೆಪಿಗೆ ಹೋಗಲಿಲ್ಲ: ಶಾಸಕ ಭೀಮಾ ನಾಯ್ಕ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 8:44 IST
Last Updated 16 ಆಗಸ್ಟ್ 2021, 8:44 IST
 ಶಾಸಕ ಭೀಮಾ ನಾಯ್ಕ
ಶಾಸಕ ಭೀಮಾ ನಾಯ್ಕ    

ಹೊಸಪೇಟೆ (ವಿಜಯನಗರ): ‘ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವಂತೆ ಆ ಪಕ್ಷದಿಂದ ನನಗೆ ಆಫರ್‌ ಬಂದಿತ್ತು. ಆದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಮುಖ ನೋಡಿ ನಾನು ಕಾಂಗ್ರೆಸ್‌ನಲ್ಲೇ ಉಳಿದೆ’ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾ ನಾಯ್ಕ ತಿಳಿಸಿದರು.

‘ಬಿಜೆಪಿಗೆ ಬರುವಂತೆ ಆ ಪಕ್ಷದಿಂದ ನನಗೂ ಕರೆ ಬಂದಿತ್ತು. ಒಂದುವೇಳೆ ಆ ಪಕ್ಷ ಸೇರಿದ್ದರೆ ಇಷ್ಟೊತ್ತಿಗಾಗಲೇ ಸಚಿವನಾಗಿರುತ್ತಿದ್ದೆ. ಸಿದ್ದರಾಮಯ್ಯನವರಿಗೆ ಮೋಸ ಮಾಡುವ ಮನಸ್ಸು ಬರಲಿಲ್ಲ. ನನ್ನನ್ನು ಕಾಂಗ್ರೆಸ್‌ಗೆ ಕರೆದು ತಂದಿದ್ದೆ ಸಿದ್ದರಾಮಯ್ಯನವರು. ಬೇರೆಯವರು ಕಾಂಗ್ರೆಸ್‌ ತೊರೆದರೂ ನನಗೆ ಪಕ್ಷ ತೊರೆಯುವ ಮನಸ್ಸಾಗಲಿಲ್ಲ. ಕುಟುಂಬ ಸದಸ್ಯರ ಜತೆ ಚರ್ಚಿಸಿದಾಗ ಅವರು ಕೂಡ ಬಿಜೆಪಿಗೆ ಹೋಗದಂತೆ ಸಲಹೆ ಮಾಡಿದ್ದರು’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘2013ರಿಂದ 2018ರ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.