
ಪ್ರಜಾವಾಣಿ ವಾರ್ತೆ
ಶಿವಕುಮಾರ್
ಹರಪನಹಳ್ಳಿ: ತಾಲ್ಲೂಕಿನ ಸಾಸ್ಚಿಹಳ್ಳಿ ಬಳಿ ಗುರುವಾರ ರಾತ್ರಿ ಬೈಕ್ ಅಪಘಾತ ಸಂಭವಿಸಿದ್ದು, ‘ಪ್ರಜಾವಾಣಿ’ ಪೇಪರ್ ಏಜೆಂಟ್ ಸಹ ಆಗಿರುವ ಸಾಸ್ವಿಹಳ್ಳಿ ಗ್ರಂಥಾಲಯ ಸಿಬ್ಬಂದಿ ಶಿವಕುಮಾರ್ (32) ಸಹಿತ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಾಸ್ವಿಹಳ್ಳಿ ಗ್ರಾಮ ಪಂಚಾಯ್ತಿ ಅಂಗವಿಕಲ ಪುನರ್ವಸತಿ ಕಾರ್ಯಕರ್ತರಾಗಿದ್ದ ಕುಣೆ ಮಾದಿಹಳ್ಳಿಯ ರವಿ (42) ಮತ್ತು ಶಿವಕುಮಾರ ಕೆಲಸ ಮುಗಿಸಿ ಸಾಸ್ವಿಹಳ್ಳಿಗೆ ತೆರಳುತ್ತಿದ್ದಾಗ ಬೈಕ್ ಪಲ್ಟಿಯಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಬಗ್ಗೆ ಶಂಕೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.