ಹೊಸಪೇಟೆ (ವಿಜಯನಗರ): ಬುಕ್ಕಸಾಗರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗೊಂಚಿಗೆರಿ ಹುಲುಗಪ್ಪ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಮೊದಲು ಅಧ್ಯಕ್ಷರಾಗಿದ್ದ ಹನುಮಂತಪ್ಪನವರು ಈಚೆಗೆ ನಿಧನರಾಗಿದ್ದರಿಂದ ಆ ಸ್ಥಾನ ತೆರವಾಗಿತ್ತು. ಹುಲುಗಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಹೊಸಪೇಟೆ ತಹಶೀಲ್ದಾರ್ ಶ್ರುತಿ ಮಲ್ಲಪ್ಪ ಗೌಡರು ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಪ್ರಕಟಿಸಿದರು. ಈ ಸಂದರ್ಭದಲ್ಲಿ 19 ಸದಸ್ಯರು, ಪಿಡಿಒ ರಾಜೇಶ್ವರಿ, ಊರಿನ ಮುಖಂಡರು ಭಾಗಿಯಾಗಿದ್ದರು.
ವಿಶೇಷಚೇತನ: ಹುಲುಗಪ್ಪ ಅವರು ಪೋಲಿಯೊದಿಂದ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು. 2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅವರು ಜಯ ಗಳಿಸಿದ್ದರು. ತಾಲ್ಲೂಕು ವಿಶೇಷ ಚೇತನರ ಸಂಘದ ಸದಸ್ಯರಾಗಿರುವ ಅವರು, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರಿಂದ ಸಂಘ ಸಂತಸಗೊಂಡಿದೆ. ವಿಶೇಷ ಚೇತನರ ಸಂಘದ ಕಾನೂನು ಸಲಹೆಗಾರ ಏನ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪಾಂಡು ನಾಯಕ್, ಉಪಾಧ್ಯಕ್ಷ ಶೇಕ್ ಮೆಹಬೂಬ್ ಬಾಷಾ, ಕಾರ್ಯದರ್ಶಿ ಹಜರತ್ ಅಲಿ, ಖಜಾಂಚಿ ತಾಯಣ್ಣ ದಾದಾಪೀರ್ ಸೇರಿದಂತೆ ಅನೇಕರು ಹುಲುಗಪ್ಪ ಅವರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.