
ಪ್ರಜಾವಾಣಿ ವಾರ್ತೆ
ಜೈಲು (ಪ್ರಾತಿನಿಧಿಕ ಚಿತ್ರ)
ಕೂಡ್ಲಿಗಿ: ಅತಿವೇಗ ಹಾಗೂ ಅಜಾರೂಕತೆಯಿಂದ ಬಸ್ ಚಲಾಯಿಸಿ ಅಪಘಾತ, ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದ ಚಾಲಕ ಆನಂದ್ ಸಿಂಗ್ ರಜಪೂತ್‍ಗೆ 6 ತಿಂಗಳು ಶಿಕ್ಷೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.
2022ರ ಜ. 20ರಂದು ಗುರುಪ್ರಶಾಂತ ಎಂಬವರು ತಮ್ಮ ಬೈಕಿನಲ್ಲಿ ಸುದೀಪ್ ಹಾಗೂ ವೆಂಕಟೇಶ್ ಅವರನ್ನು ಕೂಡಿಸಿಕೊಂಡು ಕೂಡ್ಲಿಗಿ ಕಡೆಯಿಂದ ಕೊಟ್ಟೂರು ಕಡೆ ಹೋಗುವಾಗ ಬತ್ತನಹಳ್ಳಿ ಕ್ರಾಸ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆನಂದಸಿಂಗ್ ರಜಪೂತ್ ಎದುರಿಗೆ ಬರುತ್ತಿದ್ದ ಮೋಟರ್ ಸೈಕಲ್‍ಗೆ ಡಿಕ್ಕಿ ಹೊಡೆಸಿದ್ದರು. ಗುರುಶಾಂತ ಅವರು ಮೃತಪಟ್ಟಿದ್ದರು.
ಹಿರಿಯ ಸಿವಿಲ್ ಮತ್ತು ಜೆಎಂಎಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್ ಜೆ. ಅವರು ವಿಚಾರಣೆ ನಡೆಸಿ, 6 ತಿಂಗಳು ಶಿಕ್ಷೆ ಹಾಗೂ ₹ 11,500 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.