ಹೊಸಪೇಟೆ (ವಿಜಯನಗರ): ಇಲ್ಲಿನ ಶ್ರೀರಾಮುಲು ಉದ್ಯಾನ ಬಳಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಕರಡಿಯೊಂದನ್ನು ಶುಕ್ರವಾರ ಬೆಳಿಗ್ಗೆ 8.45ರ ಸುಮಾರಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು.
ಅದರ ಮರಿ ಇನ್ನೂ ಸಿಕ್ಕಿಲ್ಲ, ಅದಕ್ಕಾಗಿ ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಶುಕ್ರವಾರ ನಸುಕಿನಲ್ಲಿ ಎರಡು ಕರಡಿಗಳು ನಗರದ ಹೃದಯ ಭಾಗದ ಈ ಉದ್ಯಾನ ಸಮೀಪ ಬಂದಿದ್ದುದನ್ನು ಜನ ನೋಡಿದ್ದರು, ಈ ಪೈಕಿ ತಾಯಿ ಕರಡಿ ಉದ್ಯಾನದಲ್ಲಿ ಓಡಾಡಿ ಬಳಿಕ ಸಮೀಪದ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಪೊದೆಯಲ್ಲಿ ಅವಿತು ಕುಳಿತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.