ADVERTISEMENT

ಕೂಡ್ಲಿಗಿ | ಕ್ಲೋರಿನ್ ಸೋರಿಕೆ: ಗೋದಾಮಿನಲ್ಲೇ ಇತ್ತು 15 ವರ್ಷದ ಸಿಲಿಂಡರ್‌!

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:06 IST
Last Updated 31 ಜುಲೈ 2025, 4:06 IST
<div class="paragraphs"><p>ಕ್ಲೋರಿನ್‌ ಸೋರಿಕೆಯಾದ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಗೋದಾಮು</p></div>

ಕ್ಲೋರಿನ್‌ ಸೋರಿಕೆಯಾದ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಗೋದಾಮು

   

ಕೂಡ್ಲಿಗಿ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ ಗೋದಮಿನಲ್ಲಿದ್ದ ಸಿಲೆಂಡರ್‌ನಿಂದ ರಾಸಾಯನಿಕ ಸೋರಿಕೆಯಾಗಿ ಮಂಗಳವಾರ ರಾತ್ರಿ 13 ಜನ ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, 15 ವರ್ಷಗಳಿಂದಲೂ ಸಿಲಿಂಡರ್ ಬಳಸದೆ ಇಟ್ಟಿದ್ದು ಏಕೆ ಎಂದು ಜನರು ಪ್ರಶ್ನಿಸಿದ್ದಾರೆ.

ಈ ಗೋದಾಮಿನಲ್ಲಿ ಸ್ವಚ್ಚತಾ ಕಾರ್ಯಕ್ಕೆಂದು ಕ್ಲೋರಿನ್ ಅಂಶವುಳ್ಳ ರಸಾಯನಿಕವನ್ನು ಸಿಲಿಂಡರಿನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಸಿಲಿಂಡರ್ ಹೊರತರುವ ಪ್ರಯತ್ನದಲ್ಲಿ ನಿರತರಾಗಿದ್ದ ಆರು ಮಂದಿ ಅಗ್ನಿಶಾಮಕ ಸಿಬ್ಬಂದಿ, ತಲಾ ಒಬ್ಬರು ಗೃಹರಕ್ಷಕ ಮತ್ತು ಪಂಚಾಯಿತಿ ಸಿಬ್ಬಂದಿ ಹಾಗೂ ಐವರು ಸಾರ್ವಜನಿಕರು ಅಸ್ವಸ್ಥಗೊಂಡಿದ್ದನ್ನು ಕಂಡು ಜನರು ದಂಗಾಗಿದ್ದಾರೆ.

ADVERTISEMENT

ಉಳಿದ ಸಿಬ್ಬಂದಿ ಸುರಕ್ಷತಾ ಕ್ರಮಗಳೊಂದಿಗೆ ಗೋದಾಮಿನ ಗೋಡೆ ಒಡೆದು ಸಿಲಿಂಡರನ್ನು ಊರ ಹೊರಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಪ್ರಲ್ಹಾದ್ ಆರ್ ಚೆನ್ನಗಿರಿ, ಪಿಎಸ್‍ಐ ಸಿ. ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.

ಕ್ಲೋರಿನ್ ತುಂಬಿದ್ದ ಸಿಲಿಂಡರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.