ಹೊಸಪೇಟೆಯಲ್ಲಿ ಸುರಿಯುತ್ತಿರುವ ಮಳೆ
ಹೊಸಪೇಟೆ: ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹೊತ್ತಿನಲ್ಲಿ ಮಳೆ ಸುರಿಸುವ ಮೂಲಕ ಪ್ರಕೃತಿಯೇ ನಮ್ಮನ್ನು ಹರಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಹೊಸಪೇಟೆಯ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, 'ಪ್ರಕೃತಿ ನಮ್ಮನ್ನು ಹರಸುತ್ತಿದೆ. ಬೆಳಿಗ್ಗೆ 11.30ಕ್ಕೆ ಜೋರು ಮಳೆಯಾಗುವುದು ಅತ್ಯಂತ ವಿರಳ. ಮಳೆಯಾದರೆ ಕೃಷಿ ಚಿಗುರುತ್ತದೆ. ಬದುಕು ಸಾರ್ಥಕವಾಗುತ್ತದೆ. ಇದು ನಮಗೆ ಸೌಭಾಗ್ಯ. ಇದರಿಂದ ನಮಗೆ ಸ್ವಲ್ಪ ಸಮಸ್ಯೆ ಆಗಬಹುದು. ಆದರೆ ಮಳೆಯೇ ನಮಗೆ ಭಾಗ್ಯ' ಎಂದರು.
ಒಂದು ಕ್ಷಣವೂ ಬಿಡುವು ಕೊಡದೇ ಜೋರಾಗಿ ಸುರಿಯುತ್ತಿರುವ ಮಳೆಯು ಕಾರ್ಯಕ್ರಮಕ್ಕೆ ತೀವ್ರ ಅಡಚಣೆಯುಂಟು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.