ADVERTISEMENT

ನದಿಯಲ್ಲಿ ಮುಳುಗಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 13:53 IST
Last Updated 26 ಮಾರ್ಚ್ 2024, 13:53 IST

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಹೋಳಿ ಪ್ರಯುಕ್ತ ಬಣ್ಣದಾಟ ಆಡಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ನದಿಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿನ ಸಿಂಗಟಾಲೂರು ಬ್ಯಾರೇಜ್ ಬಳಿ ನಡೆದಿದೆ.

ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ಬಿ.ಇಡಿ. ವಿದ್ಯಾರ್ಥಿ ಕೊಂಪಿ ಯುವರಾಜ (23) ಮೃತರು. ಸ್ವಗ್ರಾಮದಲ್ಲಿ ಸೋಮವಾರ ಹೋಳಿ ಸಂಭ್ರಮಾಚರಣೆ ಮುಗಿಸಿ ಸ್ನೇಹಿತರೊಂದಿಗೆ ಸಿಂಗಟಾಲೂರು ಬ್ಯಾರೇಜ್ ಬಳಿ ನದಿ ಸ್ನಾನಕ್ಕೆ ತೆರಳಿದ್ದ ಯುವಕ ಆಳವಾದ ಗುಂಡಿಯಲ್ಲಿ ಮುಳುಗಿದ್ದ. ರಾತ್ರಿಯಾದರೂ ಶವ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಅಂಗೂರು ಗ್ರಾಮದ ಈಜು ಪರಿಣಿತರಾದ ಕೆ.ಸಿ.ಪರಶುರಾಮ, ಕೆ.ಭೀಮೇಶ, ಗಾಂಧೀಜಿ, ಮುತ್ತಪ್ಪ, ಪಕ್ಕೀರೇಶ, ಅರ್ಜುನ ಕಾಟಾಪುರ ಅವರು ನದಿಯಲ್ಲಿ ಶೋಧ ನಡೆಸಿ, ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT