
ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ ಮಲ್ಲಿಕಾರ್ಜುನ ವಿರಕ್ತ ಮಠದಲ್ಲಿ ಗುರುವಾರ ಕಾರ್ತಿಕೋತ್ಸವ ಜರುಗಿತು. ಮಠದ ಚನ್ನಬಸವ ದೇವರ ಸಾನ್ನಿಧ್ಯದಲ್ಲಿ ಮಕ್ಕಳು ದೀಪೋತ್ಸವಕ್ಕೆ ಚಾಲನೆ ನೀಡಿದರು.
‘ದೀಪೋತ್ಸವ ಜ್ಞಾನದ ಸಂಕೇತ. ಬದುಕಿನ ಕತ್ತಲೆ ಕಳೆದು ಬೆಳಕು ಮೂಡಿಸುವ ಮಾರ್ಗವಾಗಿದೆ. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿ ಎಲ್ಲರೂ ದೀಪಗಳನ್ನು ಬೆಳಗಬೇಕು’ ಎಂದು ಚನ್ನಬಸವ ದೇವರು ಹೇಳಿದರು.
ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಮಲ್ಲಿಕಾರ್ಜುನ ಮಠದ ಅಧ್ಯಕ್ಷ ಮಂಜುನಾಥ ಹೊಟ್ಟಿಗೌಡ್ರ ಹಾಗೂ ಗ್ರಾಮದ ಮುಖಂಡರು ಇದ್ದರು. ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಸಂಪನ್ನಗೊಂಡಿತು. ದೇವಸ್ಥಾನ ಆವರಣದಲ್ಲಿ ಭಕ್ತರು ಹಣತೆಗಳನ್ನು ಬೆಳಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.