ADVERTISEMENT

ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:51 IST
Last Updated 8 ಅಕ್ಟೋಬರ್ 2024, 14:51 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ದಶಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಶಾಸಕ ಕೆ. ನೇಮರಾಜನಾಯ್ಕ, ತಹಶೀಲ್ದಾರ್ ಆರ್. ಕವಿತ ಪರಿಹಾರದ ಆದೇಶ ಪತ್ರ ನೀಡಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ದಶಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಶಾಸಕ ಕೆ. ನೇಮರಾಜನಾಯ್ಕ, ತಹಶೀಲ್ದಾರ್ ಆರ್. ಕವಿತ ಪರಿಹಾರದ ಆದೇಶ ಪತ್ರ ನೀಡಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ದಶಮಾಪುರ ಗ್ರಾಮದಲ್ಲಿ ಈಚೆಗೆ ಸಿಡಿಲು ಬಡಿದು ಮೃತಪಟ್ಟ ಮೃತಪಟ್ಟ ರೈತರ ಮನೆಗಳಿಗೆ ಶಾಸಕ ಕೆ.ನೇಮರಾಜನಾಯ್ಕ ಹಾಗೂ ತಹಶೀಲ್ದಾರ್ ಆರ್.ಕವಿತ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮೃತ ಬಣಕಾರ ನಾರಪ್ಪ ಮತ್ತು ಬಣಕಾರ ಪ್ರಶಾಂತ ಅವರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹5ಲಕ್ಷ ಪರಿಹಾರದ ಆದೇಶ ಪತ್ರಗಳನ್ನು ನೀಡಿದರು.

ಮುಖಂಡರಾದ ಮಾಳಿಗಿ ಗಿರೀಶ್, ಚಂದ್ರಪ್ಪ, ಸಿದ್ದಬಸಪ್ಪ, ಜಿ.ಎಂ. ಜಗದೀಶ್, ನಾಗರಾಜ್, ಬ್ಯಾಟಿ ನಾಗರಾಜ್, ಸಿದ್ದಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.