
ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಇ–ಕೆವೈಸಿ ಮಾಡುತ್ತಿರುವುದು
ಹೊಸಪೇಟೆ: ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಪಿಎಂ-ಕಿಸಾನ್ ಯೋಜನೆ ಸೇರಿದಂತೆ ಇತರೆ ಯೋಜನೆಗಳಾದ ಬರ ಪರಿಹಾರ, ಬೆಳೆ ವಿಮೆ ಮುಂತಾದ ಯೋಜನೆಗಳಿಗೆ ಕೇಂದ್ರ ನೊಂದಾಯಿತ ರೈತರ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ರೈತರು ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ, ಮೊಬೈಲ್ ನಂಬರ್‌ಗಳನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಕಡ್ಡಾಯವಾಗಿ ತಮ್ಮ ಎಫ್.ಐ.ಡಿಯಲ್ಲಿ ಸೇರ್ಪಡಿಸಿಕೊಳ್ಳುವುದು ಮತ್ತು ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ ರೀತಿಯಲ್ಲಿ ನೀಡುವುದು ಕಡ್ಡಾಯವಾಗಿದೆ.
ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ, ತಾಲ್ಲೂಕು ಕೃಷಿ ನಿರ್ದೇಶಕರನ್ನಾಗಲಿ ಅಥವಾ ಹಿರಿಯ ಸಹಾಯಕ ನಿರ್ದೇಶಕರನ್ನಾಗಲಿ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.