ಹೊಸಪೇಟೆ (ವಿಜಯನಗರ): ಹೊಸ ವರ್ಷದ ಸ್ವಾಗತದಲ್ಲಿ ಮಿಂದೆದ್ದ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ₹5.77 ಕೋಟಿ ಮೌಲ್ಯದ ವಿವಿಧ ಬಗೆಯ ಮದ್ಯ ಮಾರಾಟವಾಗಿದೆ.
10,706 ಲಿಕ್ಕರ್ ಬಾಕ್ಸ್ (ಪೆಟ್ಟಿಗೆಗಳು) ಹಾಗೂ 5,169 ಬಿಯರ್ ಬಾಕ್ಸ್ ಮಾರಾಟವಾಗಿದೆ. ಡಿಸೆಂಬರ್ ತಿಂಗಳ ಲೆಕ್ಕ ಹಾಕಿದರೆ ಜಿಲ್ಲೆಯಲ್ಲಿ 49.86 ಲಕ್ಷ ಲಿಕ್ಕರ್ ಬಾಟಲ್‌ಗಳು ಹಾಗೂ 10.24 ಲಕ್ಷ ಬಿಯರ್ ಬಾಟಲ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1,566 ಬಾಕ್ಸ್‌ಗಳಷ್ಟು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಶಾಂತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ 154 ವಿವಿಧ ಬಗೆಯ ವೈನ್‌ಶಾಪ್, ಬಾರ್, ಇತರ ಮದ್ಯ ಮಾರಾಟ ಮಳಿಗೆಗಳಿವೆ.
ಅನಾಹುತ ಇಲ್ಲ: ‘ಜಿಲ್ಲೆಯ ಯಾವ ಕಡೆಯಲ್ಲೂ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದ್ದಾರೆ.
ವರ್ಷಾಂತ್ಯದ ಮೂರು ದಿನಗಳಲ್ಲಿ ಅಂದರೆ ಡಿ.29ರಿಂದ 31ರವರೆಗೆ ಜಿಲ್ಲೆಯಲ್ಲಿ ಕುಡಿದು ಚಾಲನೆ ಮಾಡಿದ 110 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.