ADVERTISEMENT

ತೆಕ್ಕಲಕೋಟೆ | ಬೆಂಕಿ: ಕರುಗಳ ದಹನ, ಬಣವೆ ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 3:18 IST
Last Updated 21 ಫೆಬ್ರುವರಿ 2026, 3:18 IST
ತೆಕ್ಕಲಕೋಟೆ ಸಮೀಪದ ನಡವಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ರೈತರ ಹುಲ್ಲಿನ ಬಣವೆ ಭಸ್ಮವಾಗಿದೆ
ತೆಕ್ಕಲಕೋಟೆ ಸಮೀಪದ ನಡವಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ರೈತರ ಹುಲ್ಲಿನ ಬಣವೆ ಭಸ್ಮವಾಗಿದೆ   

ತೆಕ್ಕಲಕೋಟೆ: ಸಮೀಪದ ನಡವಿ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಹುಲ್ಲಿನ ಬಣವೆ ಹಾಗೂ ದನದ ಕೊಟ್ಟಿಗೆ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ಸಂಭವಿಸಿದೆ.

ಗ್ರಾಮದ ಕಂಪ್ಲಿ ರಸ್ತೆಯಲ್ಲಿನ ರೈತ ಕೆ.ಮೂರ್ತಿ ಅವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ ಪಕ್ಕದಲ್ಲಿ ಇದ್ದ ದನದ ಕೊಟ್ಟಿಗೆಗೆ ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಒಂದು ಎಮ್ಮೆ ಕರು ಹಾಗೂ ಒಂದು ಆಕಳು ಕರು ಬೆಂಕಿಗೆ ಆಹುತಿಯಾಗಿವೆ. ₹1.10 ಲಕ್ಷ ಮೌಲ್ಯದ ಹುಲ್ಲಿನ ಬಣವೆ ಸುಟ್ಟಿರುವುದಾಗಿ ಅಂದಾಜಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ADVERTISEMENT

ರಸ್ತೆ ಬದಿಯ ತಿಪ್ಪೆ ಭಸ್ಮ

ತೆಕ್ಕಲಕೋಟೆ: ಪಟ್ಟಣದ ನಿಟ್ಟೂರು ರಸ್ತೆಯ ಬಾಬಾ ರೈಸ್ ಮಿಲ್ ಬಳಿ ರಸ್ತೆ ಬದಿಯಲ್ಲಿನ ತಿಪ್ಪೆಗಳಿಗೆ ಶುಕ್ರವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 4 ತಿಪ್ಪೆಗಳು ಸುಟ್ಟು ಭಸ್ಮವಾಗಿವೆ.

ಸಿರುಗುಪ್ಪ, ಕುರುಗೋಡು ಹಾಗೂ ಬಳ್ಳಾರಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಜನರೇ ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದಾರೆ. ಪಟ್ಟಣ ಪಂಚಾಯಿತಿಯ ಜೆಸಿಬಿ ಸಹಾಯದಿಂದ ಉಳಿದ ತಿಪ್ಪೆಗಳನ್ನು ಸರಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು.

ನಡವಿ ಗ್ರಾಮಕ್ಕೆ ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಸಂಜೆ ಆಗಮಿಸಿ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.