ADVERTISEMENT

ವಾಲ್ಮೀಕಿ ನಾಯಕರಿಂದ ಬೇಟೆ: ಲಾಂಗ್‌, ಕತ್ತಿ ಹಿಡಿದು ಮೆರವಣಿಗೆ

ವಾಲ್ಮೀಕಿ ನಾಯಕರಿಂದ ಬೇಟೆ- ಪ್ರಾಣಿ, ಪಕ್ಷಿಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 19:30 IST
Last Updated 3 ಏಪ್ರಿಲ್ 2022, 19:30 IST
ವಾಲ್ಮೀಕಿ ಬೇಡ ನಾಯಕರು ಭಾನುವಾರ ಹೊಸಪೇಟೆಯಲ್ಲಿ ಬಂದೂಕು, ಲಾಂಗ್‌ ಹಾಗೂ ಬೇಟೆಯಾಡಿದ ಪ್ರಾಣಿ, ಪಕ್ಷಿಗಳೊಂದಿಗೆ ಮೆರವಣಿಗೆ ಮಾಡಿದರು
ವಾಲ್ಮೀಕಿ ಬೇಡ ನಾಯಕರು ಭಾನುವಾರ ಹೊಸಪೇಟೆಯಲ್ಲಿ ಬಂದೂಕು, ಲಾಂಗ್‌ ಹಾಗೂ ಬೇಟೆಯಾಡಿದ ಪ್ರಾಣಿ, ಪಕ್ಷಿಗಳೊಂದಿಗೆ ಮೆರವಣಿಗೆ ಮಾಡಿದರು   

ಹೊಸಪೇಟೆ (ವಿಜಯನಗರ): ಯುಗಾದಿ ಪ್ರಯುಕ್ತ ಇಲ್ಲಿನ ಏಳುಕೇರಿ ವಾಲ್ಮೀಕಿ ಬೇಡ ನಾಯಕ ಸಮುದಾಯದವರು ಬಂದೂಕು, ಕತ್ತಿ, ಲಾಂಗ್‌ ಹಿಡಿದುಕೊಂಡು ಅವರು ಬೇಟೆಯಾಡಿದ ಪ್ರಾಣಿ, ಪಕ್ಷಿಗಳೊಂದಿಗೆ ಭಾನುವಾರ ನಗರದಲ್ಲಿ ಮೆರವಣಿಗೆ ಮಾಡಿದರು.

ಯುಗಾದಿ ಮಾರನೇ ದಿನ ಬೇಟೆಯಾಡುವ ಸಂಪ್ರದಾಯ ವಾಲ್ಮೀಕಿ ನಾಯಕರಲ್ಲಿದೆ. ಬೇಟೆಯಾಡಿದ ಪ್ರಾಣಿ, ಪಕ್ಷಿಗಳನ್ನು ಮೆರವಣಿಗೆ ಮಾಡಿ, ಆಯುಧಗಳಿಗೆಚಿತ್ರಕೇರಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ.ಅರಣ್ಯ ಇಲಾಖೆಯು ಅರಣ್ಯದಲ್ಲಿ ಬೇಟೆಯಾಡುವುದನ್ನು ಹಿಂದೆಯೇ ನಿರ್ಬಂಧಿಸಿದೆ. ಆದರೂ, ಭಾನುವಾರ ಇಲ್ಲಿನ ಚಿತ್ರಕೇರಿಯಲ್ಲಿ, ಬೇಟೆಯಾಡಿದ ಮೊಲ, ಕೌಜುಗ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳನ್ನು ಹಿಡಿದಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದರು. ಇದರಲ್ಲಿ ಕತ್ತಿ, ಲಾಂಗ್‌ ಹಿಡಿದು ಮಕ್ಕಳೊಂದಿಗೆ ಸಮು
ದಾಯದ ಹಲವರು ಭಾಗವಹಿಸಿದ್ದರು.

‘ಈ ವಿಷಯ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಸಿಬ್ಬಂದಿ ಕಳುಹಿಸಿ ಪರಿಶೀಲಿಸುವೆ’ ಎಂದು ವಲಯ ಅರಣ್ಯ ಅಧಿಕಾರಿ ವಿನಯ್‌ ಕೆ.ಸಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‘ಸಾರ್ವಜನಿಕ ಸ್ಥಳದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿರುವುದಕ್ಕೆ ಸಂಬಂಧಿಸಿದಂತೆ ಉಕ್ಕಡಕೇರಿಯ ಕೆ. ಹನುಮೇಶ್‌ (37) ಹಾಗೂ ಚಿತ್ರ ಕೇರಿಯ ಕಿಚಡಿ ಯಮನೂರಪ್ಪ (29) ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.