ADVERTISEMENT

ಹೊಸಪೇಟೆ: ಮೂಕಪ್ರಾಣಿಗಳ ನೆರವಿಗೆ ಗೃಹರಕ್ಷಕರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 10:39 IST
Last Updated 24 ಏಪ್ರಿಲ್ 2021, 10:39 IST
ಗೃಹರಕ್ಷಕ ದಳ ಹಾಗೂ ಪುರಾತತ್ವ ಇಲಾಖೆಯ ಸಿಬ್ಬಂದಿ ಶನಿವಾರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಗಳಿಗೆ ಬಿಸ್ಕತ್‌, ಬಾಳೆಹಣ್ಣು ಹಂಚಿದರು
ಗೃಹರಕ್ಷಕ ದಳ ಹಾಗೂ ಪುರಾತತ್ವ ಇಲಾಖೆಯ ಸಿಬ್ಬಂದಿ ಶನಿವಾರ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಗಳಿಗೆ ಬಿಸ್ಕತ್‌, ಬಾಳೆಹಣ್ಣು ಹಂಚಿದರು   

ಹೊಸಪೇಟೆ(ವಿಜಯನಗರ): ತಾಲ್ಲೂಕಿನ ಹಂಪಿಯಲ್ಲಿ ನೆಲೆಸಿರುವ ಮೂಕ ಪ್ರಾಣಿಗಳ ನೆರವಿಗೆ ಗೃಹರಕ್ಷಕ ದಳ ಮತ್ತು ಪುರಾತತ್ವ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ.

ಹಂಪಿಯಲ್ಲಿ ಅಪಾರ ಸಂಖ್ಯೆಯ ಮಂಗ, ಬಿಡಾಡಿ ದನ, ಬೀದಿ ನಾಯಿಗಳಿವೆ. ಸದಾ ಜನರಿಂದ ಗಿಜಿಗುಡುವ ವಿರೂಪಾಕ್ಷೇಶ್ವರ ದೇವಸ್ಥಾನ, ರಥಬೀದಿಯಲ್ಲಿ ಭಕ್ತರು, ವ್ಯಾಪಾರಿಗಳು ಕೊಡುವ ಬಾಳೆಹಣ್ಣು, ಕೊಬ್ಬರಿ, ಬಿಸ್ಕತ್‌ ತಿಂದು ಓಡಾಡುತ್ತವೆ. ಈಗ ಸ್ಮಾರಕ, ದೇವಸ್ಥಾನದ ಬಾಗಿಲು ಮುಚ್ಚಿರುವುದರಿಂದ ಅವುಗಳಿಗೆ ಆಹಾರ ಸಿಗದಂತಾಗಿದೆ.

ಅವುಗಳ ಮೂಕರೋದನ ಕಂಡು ಗೃಹರಕ್ಷಕರು, ಪುರಾತತ್ವ ಇಲಾಖೆಯ ಸಿಬ್ಬಂದಿ ಮುಂದೆ ಬಂದು, ಶನಿವಾರ ಅವುಗಳಿಗೆ ಬಿಸ್ಕತ್‌, ಬಾಳೆಹಣ್ಣು ಹಂಚಿದರು. ಗೃಹರಕ್ಷಕ ದಳದ ಎಚ್.ಸಿದ್ದಪ್ಪ, ಪಿ.ಬಾಷಾ ಸಾಬ್, ಬಿ.ಗಂಗಾಧರ್ ಹಾಗೂ ಪುರಾತತ್ವ ಇಲಾಖೆಯ ಶ್ರೀಧರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.