
ಹೊಸಪೇಟೆ (ವಿಜಯನಗರ): ಹಂಪಿಯ ಚಕ್ರತೀರ್ಥ ತುಂಗಭದ್ರಾ ನದಿಯಲ್ಲಿ ತೆಪ್ಪ ಸವಾರಿಯನ್ನು ತಕ್ಷಣದಿಂದ ಬಂದ್ ಮಾಡಲಾಗಿದ್ದು, ಎಲ್ಲಾ ತೆಪ್ಪಗಳನ್ನು ದಡದಲ್ಲಿ ತಂದು ಇಡಲಾಗಿದೆ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ತುಂಗಭದ್ರಾ ಅಣೆಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಚಕ್ರತೀರ್ಥ ಭಾಗದಲ್ಲಿ ನೀರಿನ ಸೆಳೆತ ಅಧಿಕವಾಗಿತ್ತು. ಅದರಲ್ಲಿ ತೆಪ್ಪ ಸವಾರಿ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಹಲವು ಪ್ರವಾಸಿಗರು ದೂರಿದ್ದರು. ‘ಪ್ರಜಾವಾಣಿ’ ಈ ಬಗ್ಗೆ ಭಾನುವಾರ ವರದಿ ಪ್ರಕಟಿಸಿತ್ತು.
ಈ ಮಧ್ಯೆ, ಭಾನುವಾರ ತುಂಗಭದ್ರಾ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಆರು ಗೇಟ್‌ಗಳ ಬದಲಿಗೆ ಎರಡು ಕ್ರೆಸ್ಟ್‌ಗೇಟ್‌ಗಳನ್ನಷ್ಟೇ ತೆರೆದು ನದಿಗೆ 5,980 ಕ್ಯೂಸೆಕ್‌ನಷ್ಟು ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಚಕ್ರತೀರ್ಥ ಭಾಗದಲ್ಲೂ ನೀರಿನ ಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಕ್ರೆಸ್ಟ್‌ಗೇಟ್‌ಗಳನ್ನು ಸಂಪೂರ್ಣ ಬಂದ್ ಮಾಡಿದರಷ್ಟೇ ನೀರಿನ ಹರಿವಿನಲ್ಲಿ ಇಳಿಕೆ ಕಂಡು ಚಕ್ರತೀರ್ಥ ಭಾಗದಲ್ಲಿ ನೀರಿನ ಸೆಳೆತ ಸಮಸ್ಥಿತಿಗೆ ಬರುತ್ತದೆ, ಅಲ್ಲಿಯವರೆಗೆ ತೆಪ್ಪ ಸವಾರಿ ಅಪಾಯಕಾರಿ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.