ADVERTISEMENT

ಹಂಪಿ ಉತ್ಸವ; ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 14:04 IST
Last Updated 26 ಜನವರಿ 2023, 14:04 IST
ಹಂಪಿ ಉತ್ಸವ ಮೆರವಣಿಗೆ
ಹಂಪಿ ಉತ್ಸವ ಮೆರವಣಿಗೆ   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ವಿಜಯನಗರ ವಸಂತ ವೈಭವ ಜಾನಪದ ಕಲಾ‌ತಂಡಗಳ ಮೆರವಣಿಗೆ ಗುರುವಾರ ಸಂಜೆ ನಗರದಲ್ಲಿ ನಡೆಯಿತು.

ಡೊಳ್ಳು ಕುಣಿತ, ಮರ ಕುಣಿತ, ಹಗಲುವೇಷಧಾರಿಗಳು, ಕಂಸಾಳೆ, ವೀರಭದ್ರ ಕುಣಿತ, ಕೋಲಾಟ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಲಾ ತಂಡಗಳು ಪಾಲ್ಗೊಂಡಿದ್ದವು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಅವರು ಡೊಳ್ಳು ಬಾರಿಸಿ ಗಮನ ಸೆಳೆದರೆ, ಪ್ರವಾಸೋದ್ಯಮ ಸಚಿವ ಅಲಂಕರಿಸಿದ ಟ್ರ್ಯಾಕ್ಟರ್ ಓಡಿಸಿದರು. ಮೆರವಣಿಗೆಯಿಂದ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.