ADVERTISEMENT

ವಿಜಯನಗರ | ಟ್ರಾವೆಲ್ಲರ್ ನೂಕ್; ಮಾರ್ಚ್ 30ರ ಗಡುವು: ಡಿ.ಸಿ ಸೂಚನೆ

ಕೇಂದ್ರ ಪುರಸ್ಕೃತ ‘ಸ್ವದೇಶಿ ದರ್ಶನ್ 2’ ಯೋಜನೆ: ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:41 IST
Last Updated 3 ಫೆಬ್ರುವರಿ 2026, 1:41 IST
ಕವಿತಾ ಎಸ್.ಮನ್ನಿಕೇರಿ
ಕವಿತಾ ಎಸ್.ಮನ್ನಿಕೇರಿ   
ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಮೂಲ ಸೌಕರ್ಯ ಸ್ಮಾರಕಗಳು, ಪ್ರವಾಸಿ ತಾಣಗಳ ಒಟ್ಟು 20 ಸ್ಥಳಗಳಲ್ಲಿ ಸ್ಥಾಪನೆಗೆ ಸೂಚನೆ

ಹೊಸಪೇಟೆ: ಕೇಂದ್ರ ಪುರಸ್ಕೃತ ‘ಸ್ವದೇಶಿ ದರ್ಶನ್ 2.0’ ಯೋಜನೆಯಡಿಯಲ್ಲಿ ವಿಶ್ವ ಪಾರಂಪರಿಕ ಹಂಪಿಗೆ ಬರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ ಬಳಿ ಪ್ರಯಾಣಿಕರ ಸುರಕ್ಷತೆಯ ತಂಗುದಾಣ ಅನುಷ್ಠಾನಗೊಳಿಸಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಾಕೀತು ಮಾಡಿದರು.

ಇಲ್ಲಿ ಟ್ರಾವೆಲ್ಲರ್ ನೂಕ್ ಕುರಿತು ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಂಪಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಒಂದೇ ಸೂರಿನಡಿ ಕುಡಿಯುವ ನೀರು, ಸ್ವಚ್ಛವಾದ ಶೌಚಾಲಯ ಮತ್ತು ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಹೊಂದಿರುವ ‘ಟ್ರಾವೆಲ್ಲರ್ ನೂಕ್’ಗಳನ್ನು ನಿರ್ಮಿಸಲಾಗುತ್ತಿದೆ. ಇವು ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಸಿಗುವಂತೆ ಅಗತ್ಯ ಮೂಲ ಸೌಕರ್ಯಗನ್ನೊಳಗೊಂಡಿರುತ್ತವೆ’ ಎಂದರು.

‘ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಹತ್ತಿರ, ಚಂದ್ರಕೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ ಒಟ್ಟು 20 ಸ್ಥಳಗಳಲ್ಲಿ ‘ಟ್ರಾವೆಲ್ಲರ್ ನೂಕ್’ ಸ್ಥಾಪಿಸಬೇಕು. ಅನುಷ್ಠಾನಗೊಳಿಸಲು ಯಾವುದೇ ರೀತಿಯ ಸ್ಥಳದ ಅಭಾವ ಅಥವಾ ಇನ್ನಿತರೆ ಅಡೆತಡೆ ಉಂಟಾದಲ್ಲಿ ತ್ವರಿತವಾಗಿ ಪರಿಹಾರ ಕಂಡುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್‌ ಅಲಿ ಅಕ್ರಂ ಷಾ, ಎಎಸ್‌ಪಿ ಜಿ.ಮಂಜುನಾಥ, ನಗರಸಭೆ ಪೌರಾಯುಕ್ತ ಎ.ಶಿವಕುಮಾರ್, ಎಎಸ್ಐ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.