
ಪ್ರಜಾವಾಣಿ ವಾರ್ತೆ
ಹಂಪಿ ಉತ್ಸವ
ಹೊಸಪೇಟೆ (ವಿಜಯನಗರ): ‘ಹಂಪಿಯಲ್ಲಿ ಫೆಬ್ರುವರಿ 13ರಿಂದ 15ರವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ಮೂರು ಸಾವಿರ ಡ್ರೋನ್ ಬಳಸಿ ಡ್ರೋನ್ ಶೋ ಪ್ರದರ್ಶಿಸಲಾಗುವುದು. ಗಾಳಿಪಟ ಉತ್ಸವ ಕೂಡ ನಡೆಸಲಾಗುವುದು. ಎರಡೂ ಕಡೆ ಇದೆ ಮೊದಲ ಬಾರಿಗೆ ಆಯೋಜಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
‘ಕಳೆದ ಸಲ ಮೈಸೂರು ದಸರಾದಲ್ಲಿ ಡ್ರೋನ್ ಶೋ ಜನಪ್ರಿಯತೆ ಗಳಿಸಿತ್ತು. ಅದಕ್ಕೆ ಹಂಪಿಗೆ ಇದೇ ಮೊದಲ ಬಾರಿಗೆ ದೆಹಲಿಯಿಂದ ಈ ಪ್ರದರ್ಶನ ಆಯೋಜಿಸುವವರನ್ನು ಕರೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾರಾಟ, ಸಾಹಸ ಕ್ರೀಡೆಗಳು, ದೋಣಿವಿಹಾರ, ಶ್ವಾನ, ಕುರಿ ಪ್ರದರ್ಶನಗಳು ಈ ಬಾರಿಯೂ ಇರಲಿವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.