ADVERTISEMENT

ಹಂಪಿ ಉತ್ಸವ: ‘ಮಧುರ ಪಿಸು ಮಾತಿಗೆ’ ಮನ ಸೋತ ಮಂದಿ

ಸಿ.ಶಿವಾನಂದ
Published 15 ಫೆಬ್ರುವರಿ 2026, 2:06 IST
Last Updated 15 ಫೆಬ್ರುವರಿ 2026, 2:06 IST
<div class="paragraphs"><p>ಹಂಪಿ ಉತ್ಸವದಲ್ಲಿ ಶುಕ್ರವಾರ ರಾತ್ರಿ ಭರ್ಜರಿ ರಸದೌತಣ ನೀಡಿದ ಶಮಿತಾ ಮಲ್ನಾಡ್‌&nbsp;–ಪ್ರಜಾವಾಣಿ ಚಿತ್ರ/ ಸಿ.ಶಿವಾನಂದ</p></div>

ಹಂಪಿ ಉತ್ಸವದಲ್ಲಿ ಶುಕ್ರವಾರ ರಾತ್ರಿ ಭರ್ಜರಿ ರಸದೌತಣ ನೀಡಿದ ಶಮಿತಾ ಮಲ್ನಾಡ್‌ –ಪ್ರಜಾವಾಣಿ ಚಿತ್ರ/ ಸಿ.ಶಿವಾನಂದ

   

ಹಂಪಿ (ವಿಜಯನಗರ): ಲೇಡಿ ರಾಕ್ ಸ್ಟಾರ್ ಖ್ಯಾತಿಯ ಹಿನ್ನೆಲೆ ಗಾಯಕಿ ಶಮಿತಾ ಮಲ್ನಾಡ್ ಮಾಡಿದ ಹಾಡುಗಳ ಮೋಡಿಗೆ ಹಂಪಿಯ ಶ್ರೀಕೃಷ್ಣದೇವರಾಯ ವೇದಿಕೆಯ ಮುಂಭಾಗ ನೆರೆದಿದ್ದ ನೂರಾರು ಜನ ಶುಕ್ರವಾರ ರಾತ್ರಿ ಹುಚ್ಚೆದ್ದು ಕುಣಿದರು.

ಶಮಿತಾ ಅವರು ಹೊಸ ಮತ್ತು ಹಳೇ ಹಾಡುಗಳಿಗೆ ಜೀವ ಆಗುವ ಮೂಲಕ ಭಾರಿ ರಸದೌತಣ ಉಣಬಡಿಸಿದರು, ಪ್ರೇಕ್ಷಕರಿಲ್ಲದೆ ಬಣಗುಡುತ್ತಿದ್ದ ಆಸನಗಳು ಶಮಿತಾ ಬರುತ್ತಿದ್ದಂತೆಯೇ ಸಾಲು ಮಂಟಪಗಳ ಎಡೆಯಿಂದ, ವಿರೂಪಾಕ್ಷ ರಥಬೀದಿಯಿಂದ ಪ್ರವಾಹ ಹರಿದು ಬಂತು.

ADVERTISEMENT

‘ಮಧುರ ಪಿಸು ಮಾತಿಗೆ, ಅದರ ತುಸು ಪ್ರೀತಿಗೆ’ ಎಂದು ನೃತ್ಯ ಕಲಾವಿದರೊಂದಿಗೆ ಹಾಡುತ್ತಾ ವೇದಿಕೆಗೆ ಬರುತ್ತಿದ್ದಂತೆಯೇ ಸೇರಿದ್ದ ನೂರಾರು ಅಭಿಮಾನಿಗಳು ಕೇಕೆ ಶಿಳ್ಳೆಗಳ ಮೂಲಕ ಸ್ವಾಗತಿಸಿದರು. ಸತತ ಒಂದೂವರೆ ಗಂಟೆಗಳ ಕಾಲ ಶಮಿತಾ ಜನರನ್ನು ರಂಜಿಸಿದರು.

ಬಂಗಾರದ ಮನುಷ್ಯ ಚಲನಚಿತ್ರದ ‘ಬಾಳ ಬಂಗಾರ ನೀನು..’, ಚಲಿಸುವ ಮೋಡಗಳು ಚಲನಚಿತ್ರದ ‘ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನು’ ಗೀತೆಗಂತೂ ಎಳೆಯರು, ಯುವಕರು, ಮಧ್ಯ ವಯಸ್ಕರು ಕೂಡ ಹೆಜ್ಜೆ ಹಾಕಿದರು. ಶಮಿತಾ ಪ್ರೇಕ್ಷಕರಿದ್ದಲ್ಲಿಗೆ ಬಂದರು, ಅವರು ಕುಣಿದರು, ನೆರೆದವರನ್ನೂ ಕುಣಿಸಿದರು.

‘ಕೇಳಿಸದೆ ಕಲ್ಲುಕಲ್ಲಿನಲಿ ಹಂಪೆಯ ನುಡಿ’, ಮತ್ತು  ‘ಜೀವಾ ಹೂವಾಗಿದೆ’ ಗೀತೆಗಳನ್ನಂತೂ ಹೃದಯತುಂಬಿ ಹಾಡಿದರು, ‘ನೀ ನೀರಿಗೆ ಬಾರೆ ಚೆನ್ನಿ ಬಿಂದಿಗೆ ಹಿಡಕೊಂಡು, ನಾ ನೋಡಕ್ ಬರ್ತೀನಿ ನಿನ್ನ ಹಸವ ಹೊಡಕೊಂಡು’, ‘ಜಲ ಜಲ ಜಲಜಾಕ್ಷಿ’ ‘ಚುಟು ಚುಟು ಎನ್ನುತೈತೆ’, ‘ಸುಂಟರಗಾಳಿ ಸುಂಟರಗಾಳಿ’ ಹಾಡುವಾಗ ಅವರಿಗಿದ್ದ ಜೋಷ್‍ಗೆ ಪ್ರೇಕ್ಷಕರು ಕುಳಿತಲ್ಲಿ ಕುಳಿತಿರಲಿಲ್ಲ. ಚಲನಚಿತ್ರಗಳಿಗೆ ಸ್ವತಃ ಹಾಡಿದ ಹಿನ್ನೆಲೆ ಹಾಡಿನ ಗೀತೆಗಳ ಜೊತೆಗೆ ಜನಪ್ರಿಯ ಹಾಡುಗಳಿಗೆ ಧ್ವನಿಯಾದರು, ರಾತ್ರಿ 12.30ರ ವರೆಗೂ ಜನ ಕದಲದೇ ಕುಳಿತ್ತಿದ್ದರು.

ಹಂಪಿ ಉತ್ಸವದಲ್ಲಿ ಶುಕ್ರವಾರ ರಾತ್ರಿ ಭರ್ಜರಿ ರಸದೌತಣ ನೀಡಿದ ಶಮಿತಾ ಮಲ್ನಾಡ್‌ 

ಕಾರ್ಯಕ್ರಮದಲ್ಲಿ ಶಮಿತಾ ಮಲ್ನಾಡ್ ಗೀತೆಗಳಿಗೆ ಸಂಗೀತ ನೀಡಿದವರೆಗಲ್ಲರೂ ಮಹಿಳೆಯರಾಗಿದ್ದು ವಿಶೇಷವಾಗಿತ್ತು. ಭುವನೇಶ್ವರಿ ಕೀಬೋರ್ಡ್, ವರ್ಷಾ ಆಚಾರ್ಯ ಕೊಳಲು, ಪ್ರಿಯಾ ಡ್ರಮ್ಸ್, ಮೇಘನಾ ಗಿಟಾರ್, ಪೂರ್ಣಿಮಾ ತಬಲಾ ವಾದ್ಯಗಳನ್ನು ನುಡಿಸಿ ಗಮನ ಸೆಳೆದರು. ಕಿರುತೆರೆಯ ರಿಯಾಲಿಟಿ ಶೋ ಖ್ಯಾತಿಯ ರಾಘವೇಂದ್ರ ಅವರ ನಿರೂಪಣೆ ಶೈಲಿ ಕಚಗುಳಿ ಇಡುವಂತಿತ್ತು. ಸಂತೋಷ್ ಮತ್ತು ವಿನೋದ್ ಅವರೂ ವಿವಿಧ ಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.