
ಹಂಪಿ ಉತ್ಸವ
ಹೊಸಪೇಟೆ: ಹಂಪಿ ಉತ್ಸವ ಪ್ರಯುಕ್ತ ಫೆ.13ರಿಂದ 16ರ ವರೆಗೆ ಆಯ್ದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
13ರ ಬೆಳಿಗ್ಗೆ 9ರಿಂದ 16ರ ಬೆಳಿಗ್ಗೆ 6ರವರೆಗೆ ಹಂಪಿ ಗ್ರಾಮದ ಸುತ್ತಮುತ್ತಲಿನ ಕಡ್ಡಿರಾಂಪುರ ಕ್ರಾಸ್‌ನಿಂದ ಕಮಲಾಪುರದವರೆಗೆ, ಹೇಮಕೂಟದಿಂದ ಎದುರು ಬಸವಣ್ಣ, ಪಿ.ಕೆ. ಹಳ್ಳಿಯಿಂದ ಕಮಲಾಪುರ ಐ.ಬಿ. ವೃತ್ತದವರೆಗೆ, ಐಬಿ ವೃತ್ತದಿಂದ ಅನಂತಶನಗುಡಿ, ಕಮಲಾಪುರ ಐ.ಬಿ ವೃತ್ತದಿಂದ ಹಾಗೂ ವಿಠ್ಠಲ ದೇವಸ್ಥಾನದಿಂದ ಕಡೆಬಾಗಿಲುವರೆಗೆ ಮಾರ್ಗವಾಗಿ ಬರುವ ಸರಕು ಸಾಗಣೆ ಹಾಗೂ ಭಾರಿ ವಾಹನಗಳ ಸಂಚಾರ ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ: ಹಂಪಿ ಉತ್ಸವಕ್ಕೆ ಆಗಮಿಸುವ ಲಘುವಾಹನ ಮತ್ತು ದ್ವಿಚಕ್ರ ವಾಹನಗಳಿಗೆ ಸಾಸಿವೆ ಕಾಳು ಗಣಪತಿ ಹಿಂಭಾಗ, ಉಗ್ರ ನರಸಿಂಹ ದೇವಸ್ಥಾನದ ಹತ್ತಿರ, ಮುಖ್ಯ ವೇದಿಕೆ ಹತ್ತಿರ ಫಣಿಸಾಯಿ ಅವರ ಜಮೀನು ಮತ್ತು ತುರ್ತ ಕಾಲುವೆ ಹತ್ತಿರದ ತೆಂಗಿನ ಮರದ ತೋಟದ ಹತ್ತಿರ ಹಾಗೂ ಶಂಕರ ಮೇಲೂರು ಅವರ ಹೊಲದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
50 ವಿಶೇಷ ಬಸ್: 3 ದಿನಗಳ ಕಾಲ ಹೊಸಪೇಟೆಯಿಂದ ಹಂಪಿಗೆ 50 ವಿಶೇಷ ಉಚಿತ ಬಸ್ ಸೇವೆ ಒದಗಿಸಲಾಗುತ್ತದೆ. ಅದಲ್ಲದೇ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ 168 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.