ADVERTISEMENT

ಹೊಸಪೇಟೆ| ಹೈ ವೊಲ್ಟೇಜ್‌ನಿಂದ ಟಿ.ವಿ, ಫ್ರಿಡ್ಜ್‌ಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 5 ಮೇ 2023, 17:39 IST
Last Updated 5 ಮೇ 2023, 17:39 IST
ಹೊಸಪೇಟೆಯ ಜೆಸ್ಕಾಂ ಎಂಜಿನಿಯರ್‌ ಗವಿಸಿದ್ದಪ್ಪ ಅವರಿಗೆ ಚಪ್ಪರದಹಳ್ಳಿ ನಿವಾಸಿಗಳು ಶನಿವಾರ ಮನವಿ ಪತ್ರ ಸಲ್ಲಿಸಿದರು
ಹೊಸಪೇಟೆಯ ಜೆಸ್ಕಾಂ ಎಂಜಿನಿಯರ್‌ ಗವಿಸಿದ್ದಪ್ಪ ಅವರಿಗೆ ಚಪ್ಪರದಹಳ್ಳಿ ನಿವಾಸಿಗಳು ಶನಿವಾರ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಹೈ ವೊಲ್ಟೇಜ್‌ನಿಂದ ಗೃಹಬಳಕೆಯ ವಸ್ತುಗಳಾದ ಟಿ.ವಿ., ಫ್ಯಾನ್‌, ಫ್ರಿಡ್ಜ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟು ಹೋಗಿರುವ ಘಟನೆ ನಗರದ ಚಪ್ಪರದಹಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ

ವಿಷಯ ತಿಳಿದು ಜೆಸ್ಕಾಂ ಎಂಜಿನಿಯರ್‌ ಗವಿಸಿದ್ದಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯರ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT