ADVERTISEMENT

ಹೊಸಪೇಟೆ: ಪ್ರಯಾಣಿಕನ ಹಣ, ಬ್ಯಾಗ್‌ ಮರಳಿಸಿ ಪ್ರಾಮಾಣಿಕತೆ ತೋರಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 6:43 IST
Last Updated 11 ಡಿಸೆಂಬರ್ 2021, 6:43 IST
ಹೊಸಪೇಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರವೀಂದ್ರ ಮಿಶ್ರಾ ಅವರಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಮಂಜುನಾಥ ಪಾಟೀಲ್‌, ಗೃಹರಕ್ಷಕ ದಳದ ಸಿಬ್ಬಂದಿ ಮೈನುದ್ದೀನ್‌ ಹಣ, ಬ್ಯಾಗ್‌ ಮರಳಿಸಿದರು
ಹೊಸಪೇಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರವೀಂದ್ರ ಮಿಶ್ರಾ ಅವರಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಮಂಜುನಾಥ ಪಾಟೀಲ್‌, ಗೃಹರಕ್ಷಕ ದಳದ ಸಿಬ್ಬಂದಿ ಮೈನುದ್ದೀನ್‌ ಹಣ, ಬ್ಯಾಗ್‌ ಮರಳಿಸಿದರು   

ಹೊಸಪೇಟೆ(ವಿಜಯನಗರ): ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ₹5 ಸಾವಿರ ನಗದು, ಅವರ ಬ್ಯಾಗ್‌ನ್ನು ಹಿಂತಿರುಗಿಸಿ ಪೊಲೀಸ್‌ ಕಾನ್‌ಸ್ಟೆಬಲ್‌, ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಾಮಾಣಿಕತೆ ತೋರಿದ್ದಾರೆ.

ಕಾನ್‌ಸ್ಟೆಬಲ್‌ ಮಂಜುನಾಥ ಪಾಟೀಲ್‌, ಗೃಹರಕ್ಷಕ ದಳದ ಸಿಬ್ಬಂದಿ ಮೈನುದ್ದೀನ್‌ ಅವರು ನಾಗಪುರದ ನಿವಾಸಿ ರವೀಂದ್ರ ಮಿಶ್ರಾ ಎಂಬುವರಿಗೆ ಹಣ, ಬ್ಯಾಗ್‌ ಮರಳಿಸಿದ್ದಾರೆ.

ಡಿ. 5ರಂದು ರವೀಂದ್ರ ಮಿಶ್ರಾ ಎಂಬುವರು ನಾಗಪುರದಿಂದ ನಗರಕ್ಕೆ ಬಂದಿಳಿದಿದ್ದಾರೆ. ಪ್ಲಾಟ್‌ಫಾರ್ಮ್‌ನಲ್ಲಿ ಟೀ ಕುಡಿದು, ಬ್ಯಾಗ್‌ ಅಲ್ಲಿಯೇ ಮರೆತು ಹಂಪಿಗೆ ತೆರಳಿದ್ದಾರೆ. ಕರ್ತವ್ಯದಲ್ಲಿದ್ದ ಮಂಜುನಾಥ, ಮೈನುದ್ದೀನ್‌ ಅವರು ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ರವೀಂದ್ರ ಅವರ ದಾಖಲೆ ಪತ್ರಗಳು ಸಿಕ್ಕಿವೆ. ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಬಳಿಕ ರವೀಂದ್ರ ಅವರು ರೈಲು ನಿಲ್ದಾಣಕ್ಕೆ ಬಂದು, ಹಣ, ಬ್ಯಾಗ್‌ ಹಾಗೂ ಅದರಲ್ಲಿದ್ದ ದಾಖಲೆಗಳನ್ನು ಪಡೆದು, ಡಿ. 8ರಂದು ನಾಗಪುರಕ್ಕೆ ಮರಳಿದ್ದಾರೆ. ರವೀಂದ್ರ ಪತ್ರ ಬರೆದು, ಇಬ್ಬರೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.