ADVERTISEMENT

ಆಲಿಕಲ್ಲು ಮಳೆಗೆ ನೆಲಕ್ಕೊರಗಿದ ರಾಗಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 13:11 IST
Last Updated 18 ಏಪ್ರಿಲ್ 2022, 13:11 IST
   

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಬಿರುಗಾಳಿ, ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿರುವುದರಿಂದ ಕೊಯ್ಲು ಹಂತದಲ್ಲಿದ್ದ ರಾಗಿ ನೆಲಕ್ಕೊರಗಿದೆ.

ಉಚ್ಚಂಗಿದುರ್ಗ, ಪುಣಭಘಟ್ಟ, ಚಟ್ನಿಹಳ್ಳಿ, ಹಿರೇಮೆಗಳಗೆರೆ, ಲಕ್ಷ್ಮೀಪುರ, ಕಂಚಿಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಅರಸೀಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಬಿರುಸು ಮಳೆಯಾಗಿದೆ.

ನಾಗತಿಕಟ್ಟೆಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ನಾಲ್ಕು ಜಾಲಿ ಮರಗಳು, ಅರಸೀಕೆರೆ ರಸ್ತೆಯಲ್ಲಿ ಬೇವಿನ ಮರ ನೆಲಕ್ಕುರುಳಿದೆ. ಕೊಯ್ಲು ಮಾಡಿದ ಮೇವು ಮಳೆಗೆ ಒದ್ದೆಯಾಗಿದೆ. ಇನ್ನಷ್ಟೇ ಹಾನಿಯ ವಿವರ ಗೊತ್ತಾಗಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.