ADVERTISEMENT

ವಿಜಯನಗರ: ಬಲ್ಡೋಟಾ ಸಿಇಒ ಮಧುಸೂದನ ಐಇಐ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:29 IST
Last Updated 15 ಡಿಸೆಂಬರ್ 2025, 5:29 IST
ಎಂಎಸ್‌ಪಿಎಲ್‌ ಸಿಇಒ ಕೆ.ಮಧುಸೂದನ ಅವರು ಐಇಐ ಮುನಿರಾಬಾದ್ ಲೋಕಲ್ ಸೆಂಟರ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು
ಎಂಎಸ್‌ಪಿಎಲ್‌ ಸಿಇಒ ಕೆ.ಮಧುಸೂದನ ಅವರು ಐಇಐ ಮುನಿರಾಬಾದ್ ಲೋಕಲ್ ಸೆಂಟರ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು   

ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ಮುನಿರಾಬಾದ್‌ನ ದಿ ಇನ್‌ಸ್ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ ಇಂಡಿಯಾದ (ಐಇಐ) ಲೋಕಲ್‌ ಸೆಂಟರ್‌ನ ಅಧ್ಯಕ್ಷರಾಗಿ ಬಾಲ್ಡೋಟಾ ಗ್ರೂಪ್‌ ಎಂಎಸ್‌ಪಿಎಲ್ ಕಂಪನಿಯ ಸಿಇಒ ಕೆ.ಮಧುಸೂದನ ಶನಿವಾರ ಅಧಿಕಾರ ವಹಿಸಿಕೊಂಡರು.

ವಿಶ್ವ ಇಂಧನ ಸಂರಕ್ಷಣಾ ದಿನಾಚರಣೆ ಜತೆಯಲ್ಲಿ ನಡೆದ ಈ ಪದಗ್ರಹಣ ಸಮಾರಂಭದಲ್ಲಿ ಸಯ್ಯದ್ ನದೀಮ್ ಉಲ್ಲಾ ಕ್ವಾದ್ರಿ ಅವರು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

ನೂತನ ಅಧ್ಯಕ್ಷ ಮಧುಸೂದನ ಮಾತನಾಡಿ, ಲೋಕಲ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯ ಸದಸ್ಯರನ್ನು ಸ್ಮರಿಸಿ, ಸಂಸ್ಥೆಯ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ಬದ್ಧತೆ ವ್ಯಕ್ತಪಡಿಸಿದರು.

ADVERTISEMENT

ಎಂಎಸ್‌ಪಿಎಲ್‌ನ ನಿರ್ದೇಶಕ ಹಾಗೂ ಐಇಐ ರಾಜ್ಯ ಸಮಿತಿ ಸದಸ್ಯ ಮೇಡಾ ವೆಂಕಟಯ್ಯ, ಕೇಂದ್ರಕ್ಕೆ ಆಯ್ಕೆಯಾದ ರಾಜ್ಯ ಸಮಿತಿ ಸದಸ್ಯ ಕೆ.ಪ್ರಭಾಕರ್ ರೆಡ್ಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.