ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಹಂಪಿಯಲ್ಲಿ ‘ಹರ್‌ ಘರ್‌ ತಿರಂಗಾ’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 7:16 IST
Last Updated 9 ಆಗಸ್ಟ್ 2022, 7:16 IST
   

ಹೊಸಪೇಟೆ (ವಿಜಯನಗರ): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಸುತ್ತಿರುವ ‘ಹರ್‌ ಘರ್‌ ತಿರಂಗಾ’ ಅಭಿಯಾನ ತಾಲ್ಲೂಕಿನ ಹಂಪಿಯಲ್ಲಿ ಭಾನುವಾರ ನಡೆಯಿತು.

ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಪ್ರಮುಖ ಸ್ಮಾರಕಗಳ ಎದುರು ತ್ರಿವರ್ಣ ಧ್ವಜ ಹಿಡಿದುಕೊಂಡು, ಆ. 15ರಂದು ಪ್ರತಿಯೊಬ್ಬರ ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕೆಂದು ತಿಳಿಸಿದರು. ಸ್ಥಳೀಯರಿಗೆ ಧ್ವಜಗಳನ್ನು ವಿತರಿಸಿದರು.

ಸ್ವಚ್ಛತಾ ಕಾರ್ಯ:ವಿವಿಧ ಸಂಘಟನೆಗಳವರು ಸೇರಿಕೊಂಡು ಭಾನುವಾರ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ADVERTISEMENT

‘ನಮ್ಮ ಹಂಪೆ ನಮ್ಮ ಸ್ವಚ್ಛತೆ’ ಘೋಷವಾಕ್ಯದಡಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಸುಮಾರು 500 ಕೆ.ಜಿ. ಗೂ ಅಧಿಕ ಪ್ಲಾಸ್ಟಿಕ್‌, ಒಣ, ಹಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಿದರು. ಪ್ರವಾಸಿ ಮಾರ್ಗದರ್ಶಿ ಸಂಘ, ಆಟೊ ಚಾಲಕರು,ರಂಜು ಆರ್ಟ್ಸ್– ಯೋಗ ಟ್ರಸ್ಟ್, ಸಿದ್ದರಾಮೇಶ್ವರ ಕಲಾ ಸಂಸ್ಕೃತಿಕ ಸಂಘದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಂಪಮ್ಮ, ಪಿ.ಡಿ.ಒ ಉಮೇಶ್ ಜಾಹಗೀರದಾರ್‌, ಸಿದ್ದಾರ್ಥ ಸಿಂಗ್‌, ಗೋವಿಂದ್ ಕುಲಕರ್ಣಿ, ಮೋಹನ್ ಚಿಕ್ ಭಟ್ಟ ಜೋಶಿ, ರಂಜಾನ್ ಬಿ., ವಿರೂಪಾಕ್ಷಿ ವಿ ಹಂಪಿ, ಪ್ರಶಾಂತ್ ಕಡ್ಡಿರಾಂಪುರ, ರೂಪ, ಸ್ವಾತಿ ಸಿಂಗ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.