ADVERTISEMENT

ಸಾಹಿತ್ಯದಿಂದಷ್ಟೇ ಭಾಷೆ ಉಳಿಸಲು ಅಸಾಧ್ಯ: ತಹಶೀಲ್ದಾರ್ ಮಹೇಶ್

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:26 IST
Last Updated 2 ನವೆಂಬರ್ 2022, 6:26 IST
ಹೊಸಕೋಟೆಯಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ರಾಜ್ಯೋತ್ಸವದ ಮೆರವಣಿಗೆಯನ್ನು ತಹಶಿಲ್ದಾರ್ ಮಹೇಶ್ ಕುಮಾರ್ ಉದ್ಘಾಟಿಸಿದರು. ಹೋ.ರಾ. ವೆಂಕಟೇಶ್, ವಿಜಯ್ ಕುಮಾರ್ ಸೇರಿದಂತೆ ಅನೇಕರು ಇದ್ದರು
ಹೊಸಕೋಟೆಯಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ರಾಜ್ಯೋತ್ಸವದ ಮೆರವಣಿಗೆಯನ್ನು ತಹಶಿಲ್ದಾರ್ ಮಹೇಶ್ ಕುಮಾರ್ ಉದ್ಘಾಟಿಸಿದರು. ಹೋ.ರಾ. ವೆಂಕಟೇಶ್, ವಿಜಯ್ ಕುಮಾರ್ ಸೇರಿದಂತೆ ಅನೇಕರು ಇದ್ದರು   

ಹೊಸಕೋಟೆ: ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡ ಭಾಷೆ ಉಳಿಬೇಕಾದರೆ ಅದು ಕೇವಲ ಸಾಹಿತ್ಯ, ಕಾದಂಬರಿ, ಕವಿತೆ ರಚನೆಯಿಂದ ಸಾದ್ಯವಿಲ್ಲ. ಬದಲಾಗಿ ಕನ್ನಡದಲ್ಲಿ ವ್ಯವಹರಿಸುವುದರಿಂದ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ತಹಶೀಲ್ದಾರ್ ಮಹೇಶ್ ಕುಮಾರ್ ಪ್ರತಿಪಾದಿಸಿದರು.

ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು. ದ್ರಾವಿಡ ಭಾಷೆಗಳಲ್ಲಿ ಕನ್ನಡವು ತನ್ನದೇ ಆದ ಶ್ರೇಷ್ಠತೆ ಹೊಂದಿದೆ ಎಂದರು.

ADVERTISEMENT

ಮದ್ರಾಸ್ ಪ್ರಾಂತ, ಕೊಡಗು ಪ್ರಾಂತ,ಮುಂಬೈ ಪ್ರಾಂತ, ಮೈಸೂರು ಪ್ರಾಂತಗಳಾಗಿ ವಿಂಗಡಣೆಯಾಗಿದ್ದ ರಾಜ್ಯವು ಇದೀಗ ಒಂದುಗೂಡಿದೆ.ಕನ್ನಡ ಉಳಿಯಬೇಕಾದರೆ ಕನ್ನಡವನ್ನು ಮಾತನಾಡುವವರು ಹೆಚ್ಚಾಗಬೇಕು. ಮಕ್ಕಳನ್ನು ಕನ್ನಡ ಸಾಹಿತ್ಯದ ಪುಸ್ತಕ ಓದಲು ಪ್ರೋತ್ಸಾಹಿಸಬೇಕು ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಹೋ.ರಾ. ವೆಂಕಟೇಶ್, ವಿಜಯ್ ಕುಮಾರ್, ನಾಗರಾಜ್, ವರದಾಪುರ ನಾಗರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ದೇಶ ಭಕ್ತರ ವೇಷವನ್ನು ಹಾಕಿಕೊಂಡಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ವಿವಿಧ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿಯ ರಥವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.