ADVERTISEMENT

ಕೀರ್ತನೆ ಮೂಲಕ ಸಮಾಜ ತಿದ್ದಿದ ಕೈವಾರ ತಾತಯ್ಯ: ಜಿ.ಕೆ.ಅಮರೀಶ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 2:52 IST
Last Updated 4 ಮಾರ್ಚ್ 2026, 2:52 IST
ಕೊಟ್ಟೂರಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಯೋಗಿ ನಾರಾಯಣ ಯತೀಂದ್ರ ಜಯಂತಿ ಆಚರಿಸಲಾಯಿತು
ಕೊಟ್ಟೂರಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ಯೋಗಿ ನಾರಾಯಣ ಯತೀಂದ್ರ ಜಯಂತಿ ಆಚರಿಸಲಾಯಿತು   

ಕೊಟ್ಟೂರು: ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದವರು ಕೈವಾರ ತಾತಯ್ಯ. ಅವರ ತತ್ವ ಆದರ್ಶದ ಬದುಕನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಜಿ.ಕೆ.ಅಮರೀಶ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗಿ ನಾರಾಯಣ ಯತೀಂದ್ರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಶರಣ, ದಾಸ ಪರಂಪರೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಬಲಿಜ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಹರೀಶ್ ಮಾತನಾಡಿ, ಕೈವಾರ ತಾತಯ್ಯ ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯೋಣ ಎಂದರು.

ADVERTISEMENT

ಮುಖಂಡರಾದ ಪಿ.ಬಾಬಯ್ಯ, ನಾರಾಯಣಪ್ಪ, ಪಿ.ಕೊಟ್ರೇಶ್, ಗೋಪಾಲ, ಮುರಳಿ, ಪ್ರಶಾಂತ, ಪ್ರವೀಣ ಕುಮಾರ್, ಕಿರಣಕುಮಾರ್, ಶಿರಸ್ತೇದಾರರಾದ ಅನ್ನದಾನೇಶ್ ಬಿ.ಪತ್ತಾರ್, ಎಚ್.ಎಂ.ಕೊಟ್ರಮ್ಮ, ಚಂದ್ರನಾಯ್ಕ, ಕಂದಾಯ ನಿರೀಕ್ಷಕ ಡಿ.ಶಿವಕುಮಾರ್, ಸಿ.ಮ.ಗುರುಬಸವರಾಜ್, ಮಂಜಮ್ಮ, ಗೌರಮ್ಮ, ಜ್ಯೋತಿಬಾಯಿ, ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.