ADVERTISEMENT

ಮಕ್ಕಳಲ್ಲಿ ಕನ್ನಡಾಭಿಮಾನ ಹೆಚ್ಚಿಸುವ ಅಗತ್ಯವಿದೆ: ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:05 IST
Last Updated 22 ನವೆಂಬರ್ 2025, 5:05 IST
ಹರಪನಹಳ್ಳಿಯಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು
ಹರಪನಹಳ್ಳಿಯಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು   

ಹರಪನಹಳ್ಳಿ: ‘ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಗಮನಹರಿಸುವ ಅಗತ್ಯವಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ ತಿಳಿಸಿದರು.

ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ನಾಡು–ನುಡಿ ಗೀತಗಾಯನ ಸ್ಪರ್ಧೆ, ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರದಾನ‌ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯವಹಾರಕ್ಕೆ ಬೇರೆ ಭಾಷೆ ಅಗತ್ಯವಿದೆ. ಆದರೆ ಮಾತೃಭಾಷೆ ಕನ್ನಡ‌ ಮರೆಯಬಾರದು’ ಎಂದರು.

ADVERTISEMENT

ಉಪನ್ಯಾಸ ನೀಡಿದ ಶಿಕ್ಷಕ ಕೂಡ್ಲಿಗಿ ಬಿ.ಬಿ. ಶಿವಾನಂದ, ‘ಹನ್ನೆರಡನೇ‌ ಶತಮಾನದ ವಚನ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿದ್ದು, ಕನ್ನಡದ ಹಿರಿಮೆ ಹೆಚ್ಚಿಸಿದೆ’ ಎಂದರು.

ಶಿಕ್ಷಕ ಟಿ.ಎಚ್.ಎಂ. ಶೇಖರಯ್ಯ ಗೆದ್ದಲಗಟ್ಟೆ ಮಾತನಾಡಿ, ‘ಜನಪದ ಸಾಹಿತ್ಯವೇ ಕನ್ನಡ ಸಾಹಿತ್ಯದ ಮೂಲಬೇರು’ ಎಂದು ಅಭಿಪ್ರಾಯಪಟ್ಟರು.

ಕೂಡ್ಲಿಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಗಡಿ ವೀರೇಶ, ರವಿಕುಮಾರ, ‌ಮಾಳ್ಗಿ ಮಂಜುನಾಥ, ಗುಡಿಹಳ್ಳಿ ಹಾಲೇಶ್, ಬಣಕಾರ‌ ರಾಜಶೇಖರ್, ನಂದೀಶ್ ಆಚಾರ್, ಅರ್ಜುನ ಪರುಸಪ್ಪ, ನಾಗರಾಜ ಪಾಟೀಲ, ವಿನಾಯಕ ಸೇರಿ 25 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೀತಗಾಯನ ಸ್ಪರ್ಧೆಯಲ್ಲಿ ವಿಜೇತ ಕೆ.ಎಂ.ದಿಶಾ, ಅಮೃತ, ಐಸಿರಿ ಅವರಿಗೆ ಬಹುಮಾನ ವಿತರಿಸಿದರು.

ಕನ್ನಡ ಉಪನ್ಯಾಸಕ‌ ಎಚ್‌. ಮಲ್ಲಿಕಾರ್ಜುನ, ಅಧ್ಯಕ್ಷತೆ ವಹಿಸಿದ್ದ ಸಪ್ನ‌‌ ಮಲ್ಲಿಕಾರ್ಜುನ ಮಾತನಾಡಿದರು. ಕೆ.ಈಶ್ವರಪ್ಪ, ಎ‌.ಅಬ್ದಲ್ ಸಲಾಂ, ಶರಣಮ್ಮ, ಎಸ್.ಎಂ‌.ಮಲ್ಲಯ್ಯ, ಚೇತನ್ ರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.