ಹೊಸಪೇಟೆ/ಹುಬ್ಬಳ್ಳಿ: ವಿಜಯನಗರ ಮತ್ತು ಧಾರವಾಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಧಾರಾಕಾರ ಮಳೆಯಾಯಿತು.
ಹೊಸಪೇಟೆ ನಗರ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಬಿರುಸಿನ ಮಳೆಯಾಯಿತು. ಹಲವು ಕಡೆ ದ್ವಿಚಕ್ರ ವಾಹನಗಳು ಕೆಟ್ಟಿದ್ದು, ಸವಾರರು ತಳ್ಳಿಕೊಂಡು ಸಾಗಬೇಕಾಯಿತು.
ಹೊಸಪೇಟೆ ತಾಲ್ಲೂಕಿನ ಕಮಮಾಪುರ, ಹಂಪಿ, ಮರಿಯಮ್ಮನಹಳ್ಳಿ ಕಡೆ ಮಳೆಯಾಯಿತು. ಉತ್ತರ ಕನ್ನಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರೆಯಿತು.
ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಶುಕ್ರವಾರ ಜೋರು ಮಳೆ ಬಿದ್ದಿತು. ಕೋಟೆ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವಕ್ಕೆ ಮಳೆ ಅಡ್ಡಿಯಾಯಿತು.
ಸಂಪಾಜೆಯಲ್ಲಿ 4.5 ಸೆಂ.ಮೀ, ಶಾಂತಳ್ಳಿ 4, ಭಾಗಮಂಡಲ 3.4, ಮಡಿಕೇರಿಯಲ್ಲಿ 3 ಸೆಂ.ಮೀ. ಮಳೆಯಾಗಿದೆ.
ಮೈಸೂರು ವರದಿ: ಮೈಸೂರು ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಬಿಟ್ಟೂ ಬಿಟ್ಟು ಜೋರು ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.