ADVERTISEMENT

ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 5:33 IST
Last Updated 14 ಡಿಸೆಂಬರ್ 2025, 5:33 IST
ಹೊಸಪೇಟೆ ತಾಲ್ಲೂಕಿನ ಎಣಿಗಿ ಬಸಾಪುರದಲ್ಲಿ ಶನಿವಾರ ಕೆಪಿಎಸ್‌ ಮ್ಯಾಗ್ನೆಟ್ ನೆಪದಲ್ಲಿ ಶಾಲೆ ಮುಚ್ಚುವ ಪ್ರಸ್ತಾಪವನ್ನು ವಿರೋಧಿಸಿ ಪ್ರತಿಭಟಿಸಲಾಯಿತು  –ಪ್ರಜಾವಾಣಿ ಚಿತ್ರ
ಹೊಸಪೇಟೆ ತಾಲ್ಲೂಕಿನ ಎಣಿಗಿ ಬಸಾಪುರದಲ್ಲಿ ಶನಿವಾರ ಕೆಪಿಎಸ್‌ ಮ್ಯಾಗ್ನೆಟ್ ನೆಪದಲ್ಲಿ ಶಾಲೆ ಮುಚ್ಚುವ ಪ್ರಸ್ತಾಪವನ್ನು ವಿರೋಧಿಸಿ ಪ್ರತಿಭಟಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ನಮ್ಮೂರಿನ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಹಳೆ ಎಣಿಗಿ ಬಸಾಪುರ, ಹೊಸ ಎಣಿಗಿ ಬಸಾಪುರ ಮತ್ತು ಹಂಪಸಾಗರ-3 ಗ್ರಾಮಗಳಲ್ಲಿ ಶನಿವಾರ ವಿದ್ಯಾರ್ಥಿಗಳು ಮತ್ತು ಪೋಷಕರು ಒಕ್ಕೊರಲಿನಿಂದ ಎಚ್ಚರಿಸಿದರು.

ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ  ರವಿಕಿರಣ್ ಜೆ.ಪಿ. ಮಾತನಾಡಿ, 'ಈ ಊರಿನ ಶಾಲೆಯನ್ನು ಮುಚ್ಚಿದರೆ ಒಂದನೇ ತರಗತಿಯ ಚಿಕ್ಕ ಮಕ್ಕಳು ಮೂರು ಮತ್ತು ನಾಲ್ಕು ಕಿಲೋ ಮೀಟರ್ ಇರುವ ಹಂಪಸಾಗರ-2 ಶಾಲೆಗೆ ಹೋಗುವುದು ಬಹಳ ಕಷ್ಟ, ಹೀಗಾದರೆ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

‘140 ವಿದ್ಯಾರ್ಥಿಗಳು ಇರುವ ಹಂಪಸಾಗರ-3 ಶಾಲೆಯನ್ನು ಸಹ ಮುಚ್ಚಲಾಗುತ್ತಿದೆ. ಈಗಾಗಲೇ ಮುಚ್ಚುವ ಶಾಲೆಗಳ ಪಟ್ಟಿಯನ್ನು ಬಿಟ್ಟಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ 738 ಶಾಲೆಗಳನ್ನು ಮುಚ್ಚಲಾಗುತ್ತಿದೆ, ಇದರ ಬಗ್ಗೆ ಪೋಷಕರು ಎಚ್ಚರದಿಂದ ಇರಬೇಕು’ ಎಂದರು.

ADVERTISEMENT

ಸಂಘಟನೆಯ ಜಿಲ್ಲಾ ಸದಸ್ಯೆ ಉಮಾದೇವಿ, ಗ್ರಾಮಸ್ಥರಾದ ವಿನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಶ್ರೀನಿವಾಸ್, ಹನುಮಂತಪ್ಪ, ಕರಿಬಸಪ್ಪ, ನಾಗರಾಜ್, ನಿಂಗಪ್ಪ, ಕೃಷ್ಣಪ್ಪ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.