ADVERTISEMENT

ಹರಪನಹಳ್ಳಿ: ಎಸ್ಟಿಗೆ ಕುರುಬ ಸಮಾಜ ಸೇರ್ಪಡೆ ವಿರೋಧಿಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 8:50 IST
Last Updated 24 ಸೆಪ್ಟೆಂಬರ್ 2025, 8:50 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ) : ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆ ವಿರೋಧಿಸಿ ಬುಧವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಹಿರೆಕೆರೆ ವೃತ್ತದಲ್ಲಿ ಆರಂಭವಾದ‌ ಪ್ರತಿಭಟನಾ ಮೆರವಣಿಗೆ ಇಜಾರಿ ಶಿರಸಪ್ಪ ವೃತ್ತ, ಜೆಸಿಐ ಸರ್ಕಲ್, ಹಳೇ ಬಸ್ ನಿಲ್ದಾಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿತು. ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಎಸ್ಟಿ ಮೀಸಲಾತಿಗೆ ಕುರುಬ ಸಮಾಜ ಸೇರಿಸಬಾರದು ಎಂದು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.

ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿ, ರಾಜ ಮದಕರಿ ನಾಯಕ, ನಟ ಸುದೀಪ್ ಅವರ ಭಾವಚಿತ್ರದ ಕೇಸರಿ, ಕೆಂಪು, ಹಳದಿ, ಬಿಳಿ ಬಣ್ಣದ ಬಾವುಟಗಳು ರಾರಾಜಿಸಿದವು. ಜಾಗೃತ ಭಿತ್ತಿಪತ್ರಗಳನ್ನು ಹಿಡಿದು ತಮ್ಮ ಬೇಡಿಕೆ ಪ್ರದರ್ಶಿಸಿದರು. ನೆರೆದಿದ್ದ ಸಾವಿರಾರು ಜನರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ, ಮುಖಂಡರಾದ ಕೋಡಿಹಳ್ಳಿ ಭೀಮಪ್ಪ, ಎಚ್.ಕೆ.ಹಾಲೇಶ್, ಕೆ.ಉಚ್ಚಂಗೆಪ್ಪ, ಶಿರಹಟ್ಟಿ ದಂಡೆಪ್ಪ, ಎಚ್‌.ಹನುಮಂತಪ್ಪ,ಲಿಂಗರಾಜ್, ಆರ್.ಲೋಕೇಶ್, ಪಟ್ನಾಮದ ನಾಗರಾಜ್, ರೊಕ್ಕಪ್ಪ, ತೆಲಿಗಿ ನಾಗರಾಜ್, ಮಂಜುನಾಥ, ಎಸ್.ಬಸವರಾಜ್ , ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ , ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ,‌ ಸಣ್ಣಹಾಲಪ್ಪ ಮಾತನಾಡಿದರು.

ಮುಖಂಡರಾದ ಕೆಂಚನಗೌಡ, ವಾಗೀಶ, ಪ್ರಕಾಶ್, ಪೂಜಾರ ಅರುಣ್, ಬೆಟ್ಟಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.