ಹರಪನಹಳ್ಳಿ (ವಿಜಯನಗರ ಜಿಲ್ಲೆ): ‘ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆದವರ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಪಕ್ಷದಲ್ಲಿ ನಿರಂತರ 5 ವರ್ಷ ಸದಸ್ಯತ್ವ ಇದ್ದವರಿಗೆ ಮಾತ್ರ ಚುನಾವಣೆಗೆ ನಿಲ್ಲಲು ಅವಕಾಶ ಎಂಬ ಅಂಶ ಕಾಯ್ದೆಯಲ್ಲಿ ಸೇರಿಸಬೇಕು’ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಇಂಥ ಕಾಯ್ದೆಯಿಂದ ಮಾತ್ರ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಪಕ್ಷಾಂತರ ಮಾಡಿದವರಿಗೆ ಜನರು ಮತ ಹಾಕಬಾರದು. ಈ ಕಾಯ್ದೆ ಮಾಡುವ ಅಧಿಕಾರ ನನಗೆ ಇದ್ದಿದ್ದರೆ, ಹಿಂಜರಿಯುತ್ತಿರಲಿಲ್ಲ’ ಎಂದರು.
‘ಪ್ರಸ್ತುತ ರಾಜಕಾರಣ ಇಲಿ, ಬೆಕ್ಕು ಮತ್ತು ಹಾವುಗಳ ಕಚ್ಚಾಟದ ಕಥೆಯಂತಾಗಿದೆ. ಯಾವುದೇ ರಾಜಕಾರಣಿ ಇನ್ನೊಬ್ಬ ರಾಜಕಾರಣಿ ತಪ್ಪು ಮಾಡಿದ್ದರೆ ದೂಷಿಸಲಿ. ಅದರ ಬದಲು ಪರಸ್ಪರ ಆಧಾರ ರಹಿತ ದೂಷಣೆ ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.