ಶಶಿಕುಮಾರ್
ಹರಪನಹಳ್ಳಿ (ವಿಜಯನಗರ ಜಿಲ್ಲೆ): ಪ್ರೇಯಸಿಯ ಮನೆಯವರ ಕೊಲೆ ಬೆದರಿಕೆಗೆ ಹೆದರಿದ ಪ್ರೇಮಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಉದ್ಗಟ್ಟಿ ದೊಡ್ಡತಾಂಡದಲ್ಲಿ (ಬಾಪೂಜಿ ನಗರ) ಗುರುವಾರ ಜರುಗಿದ್ದು, ಪ್ರೇಯಸಿ ಸೇರಿ ನಾಲ್ವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಪೂಜಿ ನಗರದ ಪಿ.ಟಿ.ಶಶಿಕುಮಾರ್ (26) ಮೃತ ಯುವಕ. ಈತ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಆಕೆಯನ್ನು ಮದುವೆಯಾಗಲು ನಿರ್ಧರಿಸಿದ್ದ.
ಯುವತಿಯ ಮನೆಯವರಿಗೆ ವಿಷಯ ಗೊತ್ತಾಗಿ 'ನಾವು ನಿನಗೆ ಹೆಣ್ಣು ಕೊಡುವುದಿಲ್ಲ' ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ್ದರು. ಇದರಿಂದ ಜೀವ ಭಯದಲ್ಲಿ ಶಶಿಕುಮಾರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಅಣ್ಣ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.