ADVERTISEMENT

ಮಾಲವಿ: ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯನ್ನು ಕೊಂದ ಮಗ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 11:01 IST
Last Updated 11 ನವೆಂಬರ್ 2025, 11:01 IST
   

ಹಗರಿಬೊಮ್ಮನಹಳ್ಳಿ: ಅಮ್ಮನಿಗೆ ಕಿರುಕುಳ ನೀಡುತ್ತಿದ್ದಾರೆ, ತನ್ನ ಪತ್ನಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸಿಟ್ಟಿನಿಂದ ಮಗ ತಂದೆಯನ್ನು ಒನಕೆಯಿಂದ ಹೊಡೆದು ಕೊಂದ ಘಟನೆ ತಾಲ್ಲೂಕಿನ ಮಾಲವಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಶಿವಲಿಂಗಪ್ಪ (70) ಮೃತರು. ಕೊಲೆ ಆರೋಪಿ ಪುತ್ರ ಶಂಕ್ರಪ್ಪನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಮೃತರ ಪತ್ನಿ ಗಂಗಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ‘ನನ್ನ ಪತಿ ಪ್ರತಿದಿನ ನನಗೆ ದೈಹಿಕ, ಮಾನಸಿಕ, ಲೈಂಗಿಕವಾಗಿ ಹಿಂಸೆ ನೀಡುತ್ತಿದ್ದರು. ನನ್ನ ಸೊಸೆ ಸ್ನಾನ ಮಾಡುವಾಗ ಕದ್ದು ನೋಡುತ್ತಿದ್ದರು. ಮಗನ ಮದುವೆ ಸಾಲ ತೀರಿದ್ದರೂ ತೀರಿಲ್ಲವೆಂದು ಸೋಮವಾರ ರಾತ್ರಿ 8 ಗಂಟೆಗೆ ಜಗಳ ತೆಗೆದಿದ್ದರು. ಆಗ ಶಂಕ್ರಪ್ಪನನ್ನು ಮನೆ ತೊರೆದು ಹೋಗು ಎಂದು ಹೇಳಿದ್ದಕ್ಕೆ ಕೋಪಗೊಂಡ ಶಂಕ್ರಪ್ಪ ತನ್ನ ತಂದೆಯನ್ನು ಜೋರಾಗಿ ತಳ್ಳಿದನು, ಶಿವಲಿಂಗಪ್ಪ ಒಳಕಲ್ಲಿನ ಮೇಲೆ ಬಿದ್ದರು. ಆಗ ಅಲ್ಲಿಯೇ ಇದ್ದ ಒನಕೆಯಿಂದ ಶಂಕ್ರಪ್ಪ ತಲೆಗೆ ಹೊಡೆದ ಕಾರಣ ಪತಿ ಶಿವಲಿಂಗಪ್ಪ ಸ್ಥಳದಲ್ಲೇ ಮೃತಪಟ್ಟರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.