ADVERTISEMENT

ಮಾ.5, 6ರಂದು ಹಸ್ತಪ್ರತಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 9:55 IST
Last Updated 1 ಮಾರ್ಚ್ 2022, 9:55 IST

ಹೊಸಪೇಟೆ (ವಿಜಯನಗರ): ವಿದ್ವಾಂಸ ಎ.ವಿ. ನಾವಡ ಅವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ 18ನೇ ಹಸ್ತಪ್ರತಿ ಸಮ್ಮೇಳನ ಮಾರ್ಚ್‌ 5, 6ರಂದು ಪುತ್ತೂರಿನಲ್ಲಿ ನಡೆಯಲಿದೆ.

ಕಿಟ್ಟೆಲ್ ಅವರ ಜೀವನ ಪಥ, ನಿಘಂಟು-ವ್ಯಾಕರಣ, ಪಠ್ಯಪುಸ್ತಕ ರಚನೆ, ಗ್ರಂಥಸಂಪಾದನೆ, ಕಾವ್ಯ, ಸಂಶೋಧನೆ, ಧರ್ಮ, ಸಾಹಿತ್ಯ ಚರಿತ್ರೆ ಕುರಿತು ಚಿಂತನ ಮಂಥನ ನಡೆಯಲಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಪುತ್ತೂರಿನ ಸುದಾನ ಕಿಟ್ಟೆಲ್‌ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಸ್ಟಡೀಸ್‌ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಸಮ್ಮೇಳನಕ್ಕೆ ಮಾ. 5ರಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ್ ಗಿರೀಶ್ ಭಟ್ ಚಾಲನೆ ನೀಡುವರು. ಕುಲಪತಿ ಪ್ರೊ. ಸ.ಚಿ. ರಮೇಶ ಅಧ್ಯಕ್ಷತೆ ವಹಿಸುವರು. ಸುದಾನ ವಸತಿ ಶಾಲೆಯ ಸಂಚಾಲಕ ವಿಜಯ ಹಾರ್ವಿನ್ ಅವರು ಹಸ್ತಪ್ರತಿ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟಿಸುವರು ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.