ಹರಪನಹಳ್ಳಿ ತಾಲ್ಲೂಕು ನಂದಿಬೇವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯತ್ತ ಮಂಗಳವಾರ ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಹೊರಪೇಟೆ ಶೇಖರಪ್ಪ ಜತೆಗೆ ಹೊರಟ ಬಿಸಿಯೂಟ ತುಂಬಿದ ತಳ್ಳು ಗಾಡಿ
–ಪ್ರಜಾವಾಣಿ ಚಿತ್ರ
ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ನಂದಿಬೇವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲೇ ಮಂಗಳವಾರದಿಂದ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ, ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಹೊರಪೇಟೆ ಶೇಖರಪ್ಪ ಅವರು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು. 11 ವರ್ಷದಿಂದ ಆಗದೆ ಇದ್ದ ವ್ಯವಸ್ಥೆಗೆ ಚಾಲನೆ ನೀಡಿದರು.
‘ಹಳೆಯ ಕಟ್ಟಡದಲ್ಲಿ ಬಿಸಿಯೂಟ ತಯಾರಿಸಿಕೊಂಡು ತಳ್ಳುವ ಬಂಡಿ ಮೂಲಕ ಪಾತ್ರೆಗಳನ್ನು ಸಾಗಿಸಿ 4ರಿಂದ 7ನೇ ತರಗತಿಯ 185 ವಿದ್ಯಾರ್ಥಿಗಳಿಗೆ ಹೊಸ ಕಟ್ಟಡದಲ್ಲೇ ಬಿಸಿಯೂಟ ಬಡಿಸಲಾಯಿತು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಸಿಯೂಟಕ್ಕಾಗಿ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿ ಮೂಲಕ ಒಂದು ಕಿ.ಮೀ.ನಡೆದು ಹೋಗಬೇಕಾದ ಸ್ಥಿತಿ ಕುರಿತು ಜನವರಿ 28ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.