ADVERTISEMENT

ವಿಜಯನಗರ | ಕೊಲೆಗೆ ಸುಪಾರಿ ಕೊಟ್ಟ ಕಾನ್‌ಸ್ಟೇಬಲ್, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 7:24 IST
Last Updated 9 ಜೂನ್ 2022, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗ್ರಾಮ ಪಂಚಾಯ್ತಿ ಸದಸ್ಯನನ್ನು ಕೊಲೆ ಮಾಡಲು ಸುಪಾರಿ ನೀಡಿದ ಘಟನೆ ತಾಲ್ಲೂಕಿನ ಆನೇಕಲ್ಲು ತಾಂಡಾದಲ್ಲಿ ನಡೆದಿದೆ.

ತಾಲ್ಲೂಕಿನ ಆನೇಕಲ್ಲು ತಾಂಡಾದ ಪೊಲೀಸ್ ಕಾನ್‌ಸ್ಟೇಬಲ್ ಪರಶುರಾಮ ನಾಯ್ಕ ಈಗ ಹೊಸಪೇಟೆಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಂಡಾದ ಗ್ರಾಮ ಪಂಚಾಯ್ತಿ ಸದಸ್ಯ ಎಲ್.ಆರ್. ಪಾಂಡುನಾಯ್ಕ ಅವರನ್ನು ಕೊಲೆ ಮಾಡಲು ರವಿನಾಯ್ಕ ಎನ್ನುವವರಿಗೆ ಫೆ. 5ರಂದು ₹10 ಲಕ್ಷ ನಗದು, ಒಂದು ಮನೆ ಕಟ್ಟಿಸಿಕೊಡುವುದಾಗಿ ಆಮಿಷ ಒಡ್ಡಿದ್ದ.

ಆರೋಪಿಯ ಸಹೋದರ ದೇವೇಂದ್ರನಾಯ್ಕ ಗ್ರಾಮ‌ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ನನ್ನ ವಿರುದ್ದ ಸೋತಿದ್ದರು. ಮತ್ತು ಅವರ ತಾಯಿ ಆನೇಕಲ್ಲು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪರಾಭವ ಗೊಂಡಿದ್ದಕ್ಕೆ ದ್ವೇಷದಿಂದ ನನ್ನ ಕೊಲೆಗೆ ಸಂಚು ನಡೆಸಿದ್ದಾರೆಂದು ಪಟ್ಟಣದ ಪೊಲೀಸ್ ಠಾಣೆಗೆ ಮೇ.26 ರಂದು ಪಾಂಡುನಾಯ್ಕ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕರಣವನ್ನು ಪಿಎಸ್ಐ ಪಿ.ಸರಳಾ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.