ಹೊಸಪೇಟೆ (ವಿಜಯನಗರ): ನಗರದ ಗಾನಗಂಗಾ ಕಲಾ ಪ್ರತಿಷ್ಠಾನ ವತಿಯಿಂದ ಮಂಗಳವಾರ ಸಂಜೆ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸ್ಮರಣೆಯ ಅಂಗವಾಗಿ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ನಮನ-2025 ಕಾರ್ಯಕ್ರಮ ನಡೆಯಿತು.
ಬಳ್ಳಾರಿಯ ಬೌದ್ಧ ಧರ್ಮಗುರು ಕಮಲರತ್ನ ಭಂತೇಜಿ ಹಾರ್ಮೋನಿಯಂ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮರಿಯಮ್ಮನಹಳ್ಳಿಯ ಪ್ರಗತಿಪರ ಚಿಂತಕ ಎಸ್.ಬಿ.ಚಂದ್ರಶೇಖರ್ ಮಾತನಾಡಿ, ಜಗತ್ತಿನ ಮನುಕುಲದ ಎದುರು ಇಂದು ಎರಡು ಆಯ್ಕೆಗಳಿವೆ, ಒಂದು ಬುದ್ದ ಮತ್ತೊಂದು ಯುದ್ದ. ಬುದ್ದನನ್ನು ಬಿಟ್ಟು ಮನುಷ್ಯ ಯುದ್ದವನ್ನು ಆಯ್ದುಕೊಂಡರೆ ಜಗತ್ತು ಸರ್ವನಾಶವಾಗುವುದು ನಿಶ್ಚಿತ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೀರೇಶ್ ಬಡಿಗೇರ್, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಮಧುರಚನ್ನಶಾಸ್ತ್ರಿ, ತಿಪ್ಪೇಸ್ವಾಮಿ ಚಲುವಾದಿ, ಸಿದ್ದಬಸಪ್ಪ, ಗುಂಡಿ ರಮೇಶ, ಗಜಾನಂದ ನಾಯ್ಕ್ ಇತರರು ಇದ್ದರು.
ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಭಂಡಾರ್‌ದಾರ್ ಪ್ರಾಸ್ತಾವಿಕ ಮಾತನಾಡಿದರು. ಅಂಜಲಿ ಭರತ ನಾಟ್ಯ ಕಲಾಸಂಘದ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.