ADVERTISEMENT

ಉದ್ಯಮಿ ಜಗದೀಶ, ನೇತ್ರ ತಜ್ಞ ಕೃಷ್ಣಪ್ರಸಾದ್‌ಗೆ ನಾಡೋಜ ಗೌರವ

9ರಂದು ಕನ್ನಡ ವಿ.ವಿ. ನುಡಿಹಬ್ಬ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 13:27 IST
Last Updated 6 ಏಪ್ರಿಲ್ 2021, 13:27 IST
ಜಗದೀಶ ಎಸ್.ಗುಡಗುಂಟಿ - ಡಾ.ಕೆ. ಕೃಷ್ಣಪ್ರಸಾದ್‌
ಜಗದೀಶ ಎಸ್.ಗುಡಗುಂಟಿ - ಡಾ.ಕೆ. ಕೃಷ್ಣಪ್ರಸಾದ್‌   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 29ನೇ ನುಡಿಹಬ್ಬ ಏ. 9ರಂದು ನಡೆಯಲಿದ್ದು, ವಿಜಯಪುರ ಜಿಲ್ಲೆ ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಏ.9ರಂದು ಸಂಜೆ 5.30ಕ್ಕೆ ವಿಶ್ವವಿದ್ಯಾಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪ್ರದಾನ ಮಾಡುವರು. ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಹತ್ತು ಜನರಿಗೆ ಡಿ.ಲಿಟ್‌ ಪದವಿ ಸೇರಿದಂತೆ ಎಂ.ಎ. ಪಿಎಚ್‌.ಡಿ., ಡಿಪ್ಲೋಮಾ ಕೋರ್ಸ್‌ ಮುಗಿಸಿರುವ ಒಟ್ಟು 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡುವರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ.ರಮೇಶ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.