ADVERTISEMENT

ನಾಗರಪಂಚಮಿ; ಹುತ್ತಕ್ಕೆ ಹಾಲೆರೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 9:54 IST
Last Updated 1 ಆಗಸ್ಟ್ 2022, 9:54 IST
ನಾಗರಪಂಚಮಿ ಹಬ್ಬ
ನಾಗರಪಂಚಮಿ ಹಬ್ಬ   

ಹೊಸಪೇಟೆ (ವಿಜಯನಗರ): ನಾಗರಪಂಚಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ತಾಲ್ಲೂಕಿನ ಬುಕ್ಕಸಾಗರದ ಏಳು ಹೆಡೆ ನಾಗಪ್ಪ, ನಗರದ ಸಂಡೂರು ರಸ್ತೆ, ನಾಗಪ್ಪನ ಕಟ್ಟೆ, ಅಮರಾವತಿ, ಚಿತ್ತವಾಡ್ಗಿ ಸೇರಿದಂತೆ ಹಲವೆಡೆ ಭಕ್ತರು ನಾಗದೇವತೆಗೆ ವಿಶೇಷ ಪೂಜೆ ನೆರವೇರಿಸಿದರು. ಹುತ್ತಕ್ಕೆ ಪುಷ್ಪ ಸಮರ್ಪಿಸಿ, ಹಾಲೆರೆದು ಹರಕೆ ತೀರಿಸಿದರು.

ಬೆಳಿಗ್ಗೆಯಿಂದಲೇ ನಾಗದೇವತೆಯ ದೇವಸ್ಥಾನಗಳಿಗೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಪೂಜೆ ಸಲ್ಲಿಸಿದ್ದರಿಂದ, ಹುತ್ತದ ಬಳಿ ಹೂ, ಕಾಯಿ, ಹಣ್ಣು, ನೈವೇದ್ಯದ ಗುಡ್ಡೆ ಸೃಷ್ಟಿಯಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.